ಹಿಂದೂ ಎಂದು ನಂಬಿಸಿ ಮದುವೆಯಾದ ಮುಸ್ಲಿಂ ಯುವಕನಿಗೆ ಥಳಿತ. ದೂರು ದಾಖಲು

ದಕ್ಷಿಣ ಕನ್ನಡ ಜಿಲ್ಲೆಯ ಕುಂಪಲದ ಯುವತಿಯನ್ನು ಮದುವೆಯಾಗಿದ್ದ ಸುಳ್ಯ ಮೂಲದ ಮಹಮ್ಮದ್‌ ಹಾರೂನ್‌

A young Muslim man, who allegedly deceived and married a girl from Hindu community, was thrashed in Kumpala here

ಉಳ್ಳಾಲ: ತಾನು ಹಿಂದೂ ಎಂದು ನಂಬಿಸಿ ಯುವತಿಯೋರ್ವಳನ್ನು ಪ್ರೀತಿಸಿ ಮದುವೆಯಾದ ಮುಸ್ಲಿಮ್ ಯುವಕನ ಮೇಲೆ ಯುವತಿ ಮತ್ತು ಆಕೆಯ ಮನೆಯವರು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಂಪಲದ ಯುವತಿಯನ್ನು ಮದುವೆಯಾಗಿದ್ದ ಸುಳ್ಯ ಮೂಲದ ಮಹಮ್ಮದ್‌ ಹಾರೂನ್‌ ಯಾನೆ ಬಶೀರ್‌(28) ಹಲ್ಲೆಗೊಳಗಾದವನು.

ಮೊಬೈಲ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಹಾರೂನ್‌ ಮೂರು ವರ್ಷಗಳ ಹಿಂದೆ ಯುವತಿಗೆ ಪರಿಚಯವಾಗಿದ್ದ. ತನಗಿಂತ 12 ವರ್ಷ ಹೆಚ್ಚು ಪ್ರಾಯದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ.

ತಾನು ಅರುಣ್‌ ಪೂಜಾರಿ ಎಂದು ಯುವಕ ಹೇಳಿಕೊಂಡಿದ್ದು ಈತನ ನಿಜ ಬಣ್ಣ ಏಳು ತಿಂಗಳ ಹಿಂದೆ ಬಯಲಾಗಿತ್ತು. ಯುವತಿಯ ಸಹೋದರಿ ಬ್ಯಾಗ್‌ ಚೆಕ್‌ ಮಾಡಿದಾಗ ಈತನ ನಿಜ ಹೆಸರು ಪತ್ತೆಯಾಗಿತ್ತು. ಈತನ ವಿರುದ್ಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಘಟನೆ ಬಳಿಕ ಈತ ಯುವತಿಯೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ. ಆದರೆ ಬುಧವಾರ ಏಕಾಏಕಿ ಹಾರೂನ್‌ ಯುವತಿ ಮನೆಗೆ ತೆರಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ಸಂದರ್ಭದಲ್ಲಿ ಯುವತಿಯ ಸಹೋದರಿ ಹಾರೂನ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಾರೂನ್‌ನ ಹುಡುಗಿಯ ಚಾಳಿಯಿಂದ ಆತನ ಮನೆಯವರೂ ಈತನನ್ನು ಮನೆಗೆ ಸೇರಿಸಿಕೊಂಡಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Get real time updates directly on you device, subscribe now.