ಬಂಟ್ವಾಳ ಬಿಜೆಪಿಗರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ಸೆರೆ

ಪ್ರಮುಖ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಹಣ ಮತ್ತು ಇತರ ಸಹಾಯ ನೀಡಿದ ಆರೋಪ

Four persons have been detained by police In connection with an incident at Bantwal in which BJP workers were threatened and attacked.

ಬಂಟ್ವಾಳ: ಬಡ್ಡಕಟ್ಟೆಯಲ್ಲಿ ಎರಡು ದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತರಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಂಜಿಕಲ್ಲಿನ ಕಜೆಬೈಲ್ ನಿವಾಸಿ ದೀಪಕ, ಬಿ.ಸಿ.ರೋಡ್ ಅಗ್ರಬೈಲ್ ನಿವಾಸಿ ಪವನ್, ಬಂಟ್ವಾಳದ ಶೈಲೇಶ್, ರಂಜಿತ್ ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಮುಖ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಹಣ ಮತ್ತು ಇತರ ಸಹಾಯ ನೀಡಿದ ಆರೋಪದಲ್ಲಿ ಈ ನಾಲ್ವರನ್ನು ಬಂಧಿಸಲಾಗಿದೆ.

ಪ್ರಮುಖ ಆರೋಪಿಗಳಾದ ಸುರೇಂದ್ರ ಬಂಟ್ವಾಳ್, ತಿಲಕ್, ಮನೋಹರ, ಪ್ರದೀಪ, ಸತೀಶ ಎಂಬವರು ತಲೆಮರೆಸಿಕೊಂಡಿದ್ದಾರೆ.

ಹೊಟೇಲೊಂದರಲ್ಲಿ ಊಟಕ್ಕೆ ಹೋಗಿದ್ದ ಬಿಜೆಪಿ ಕಾರ್ಯಕರ್ತರಾದ ಗಣೇಶ್ ರೈ ಮಾಣಿ ಮತ್ತು ಪುಷ್ಪರಾಜ ಎಂಬವರಿಗೆ ಸುರೇಂದ್ರ ಬಂಟ್ವಾಳ ಮತ್ತು ಇತರರು ಕೊಲೆಗೆ ಯತ್ನಿಸಿದ್ದಾರೆ ಎಂದು ದೂರಲಾಗಿತ್ತು.

ತಲವಾರು ತೋರಿಸುತ್ತಾ ಸುರೇಂದ್ರ ಬಂಟ್ವಾಳ್ ಅವಾಚ್ಯ ನಿಂದನೆಗೈಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಬಂಟ್ವಾಳ ಬೈಪಾಸ್ ನಲ್ಲಿರುವ ಸೆಲೂನ್ ಒಂದಕ್ಕೆ ನುಗ್ಗಿ ದೀಕ್ಷಿತ್ ಎಂಬವರಿಗೆ ಭುವಿತ್ ಮತ್ತು ಇತರರು ಹಲ್ಲೆಗೈದಿರುವುದಕ್ಕೆ ಪ್ರತೀಕಾರವಾಗಿ ಸೋಮವಾರ ಮಧ್ಯಾಹ್ನ ಬಿಜೆಪಿ ಕಾರ್ಯಕರ್ತರ ಕೊಲೆಗೆ ಯತ್ನಿಸಲಾಗಿದೆ ಎಂದು ದೂರಲಾಗಿತ್ತು.

ಎರಡೂ ಪ್ರಕರಣಗಳಲ್ಲಿ ಆರೋಪಿಗಳ ಬಂಧನಕ್ಕೆ ಪೊಲೀಸರು ತಂಡ ರಚಿಸಿದ್ದು, ಈಗ ನಾಲ್ವರು ಬಂಟ್ವಾಳ ನಗರ ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ.

Get real time updates directly on you device, subscribe now.