ಕ್ಯಾನ್ಸರ್ ವಿಭಾಗದಲ್ಲಿ ಸಂಶೋಧನೆ ನಡೆಸಿ ಪಿಎಚ್‌ಡಿ ಪಡೆದ ಡಾ.ಮುಹಮ್ಮದ್ ಮುಬೀನ್‌ಗೆ ಸನ್ಮಾನ

ಸ್ ಐ ಓ ಉಳ್ಳಾಲ ಘಟಕದ ವತಿಯಿಂದ ಸನ್ಮಾನ

ಕ್ಯಾನ್ಸರ್ ವಿಭಾಗದಲ್ಲಿ ಸಂಶೋಧನೆ ನಡೆಸಿ ಮಣಿಪಾಲ ವಿಶ್ವವಿಧ್ಯಾಲಯದಿಂದ ಪಿ ಎಚ್ ಡಿ ಪದವಿ ಗಳಿಸಿದ ಫಾರ್ಮಸ್ಸುಟಿಕಲ್ ವಿಭಾಗದ ಸಂಶೋಧಕ ಡಾ.ಮುಹಮ್ಮದ್ ಮುಬೀನ್ ಅವರಿಗೆ ಎಸ್ ಐ ಓ ಉಳ್ಳಾಲ ಘಟಕದ ವತಿಯಿಂದ ಸನ್ಮಾನ ಕಾರ್ಯಕ್ರಮ

ಮಂಗಳೂರು: ಕ್ಯಾನ್ಸರ್ ವಿಭಾಗದಲ್ಲಿ ಸಂಶೋಧನೆ ನಡೆಸಿ ಮಣಿಪಾಲ ವಿಶ್ವವಿಧ್ಯಾಲಯದಿಂದ ಪಿ ಎಚ್ ಡಿ ಪದವಿ ಗಳಿಸಿದ ಫಾರ್ಮಸ್ಸುಟಿಕಲ್ ವಿಭಾಗದ ಸಂಶೋಧಕ ಡಾ.ಮುಹಮ್ಮದ್ ಮುಬೀನ್ ಅವರಿಗೆ ಎಸ್ ಐ ಓ ಉಳ್ಳಾಲ ಘಟಕದ ವತಿಯಿಂದ ಸನ್ಮಾನ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಜಮಾಅತೇ ಇಸ್ಲಾಮಿ ಉಳ್ಳಾಲ ಘಟಕದ ಅಧ್ಯಕ್ಷರಾದ ಜನಾಬ್ ಅಬ್ದುಲ್ ಕರೀಮ್ ಮತ್ತು ಉಪಾಧ್ಯಕ್ಷರಾದ ಅಬ್ದುಲ್ ರಹೀಂ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಎಸ್ ಐ ಓ ಉಳ್ಳಾಲ ಘಟಕದ ಅಧ್ಯಕ್ಷರಾದ ಅಶೀರುದ್ದೀನ್ ಪ್ರಾಸ್ತವಿಕ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು.

ಜನಾಬ್ ಅಬ್ದುಲ್ ರಹೀಮ್ ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ “ನಾಡಿನ ಸಾಮರಸ್ಯವನ್ನು ಉಳಿಸುವ ಭವಿಷ್ಯದ ಪ್ರಜೆಗಳಾಗಿ ವಿಧ್ಯಾರ್ಥಿಗಳು ಬದಲಾಗಬೇಕು ಶಿಕ್ಷಣದೊಂದಿಗೆ ದೇವ ಭಯವಿರುವವರಾಗಬೇಕು ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದಡಾ.ಮುಹಮ್ಮದ್ ಮುಬೀನ್ ” ವಿದ್ಯಾವಂತರಾಗಿ ಬೆಳೆಯಲು ಎಸ್ ಐ ಓ ಉತ್ತಮ ವೇದಿಕೆ. ಪಿ ಎಚ್ ಡಿ ಪದವಿಗಳಿಸುವುದು ಕಾಲದ ಬೇಡಿಕೆಯಾಗಿದೆ. ಎಲ್ಲರೂ ಪಿ ಎಚ್ ಡಿ ಪದವಿ ಗಳಿಸುವವರಾಗಬೇಕು ಕಠಿಣ ಪರಿಶ್ರಮ ಮತ್ತು ತ್ಯಾಗ ಅತ್ಯಗತ್ಯ. ವಿಜ್ಞಾನ ಬೆಳೆಯುತ್ತಿದೆ ನಾವು ಬೆಳೆಯಬೇಕು ಎನ್ನುತ್ತಾ ತಮ್ಮ ಯಶಸ್ವಗೆ ಸಹಕರಿಸಿದವರನ್ನು ನೆನೆದು ಭಾವುಕರಾದರು.

ತೊಕ್ಕೊಟ್ಟು ಘಟಕದ ಅಧ್ಯಕ್ಷರಾದ ನಿಝಾಮ್ ಉಳ್ಳಾಲ,ಅನಿವಾಸಿ ಬಾರತೀಯ ಮುಶರಫ್ ಬಬ್ಬುಕಟ್ಟೆ, ಗುಲ್ಶನ್ ಸಂಚಾಲಕರಾದ ಮುಝಮ್ಮಲ್,ವೇಧಿಕೆತಯಲ್ಲಿ ಉಪಸ್ಥಿತರಿದ್ದರು. ಬ್ರ.ಶಾಹಿಲ್ ಕಿರಾಅತ್ ಪಠಿಸಿದರು. ವಾಸಿಫ್ ಧನ್ಯವಾದವಿತ್ತರು

Get real time updates directly on you device, subscribe now.