ಪಿ. ಲಂಕೇಶ್ ಅವರ ಟಿ.ಪ್ರಸನ್ನನ ಗೃಹಸ್ಥಾಶ್ರಮ ನಾಟಕ ಕೊಂಕಣಿಯಲ್ಲಿ ಯಶಸ್ವಿ ಪ್ರದರ್ಶನ
ಕೊಂಕಣಿ ಸಾಹಿತಿ ರೋಶು ಬಜ್ಪೆಯವರು ‘ಹೋಂ ಸ್ವೀಟ್ ಹೋಂ’ ಎಂದು ಅನುವಾದಿಸಿದ್ದಾರೆ
ಖ್ಯಾತ ಸಾಹಿತಿ, ಪತ್ರಕರ್ತ ಪಿ. ಲಂಕೇಶ್ ಅವರ ಟಿ.ಪ್ರಸನ್ನನ ಗೃಹಸ್ಥಾಶ್ರಮ ನಾಟಕವನ್ನು ಕೊಂಕಣಿ ಸಾಹಿತಿ ರೋಶು ಬಜ್ಪೆಯವರು ‘ಹೋಂ ಸ್ವೀಟ್ ಹೋಂ’
ಮಂಗಳೂರು: ಖ್ಯಾತ ಸಾಹಿತಿ, ಪತ್ರಕರ್ತ ಪಿ. ಲಂಕೇಶ್ ಅವರ ಟಿ.ಪ್ರಸನ್ನನ ಗೃಹಸ್ಥಾಶ್ರಮ ನಾಟಕವನ್ನು ಕೊಂಕಣಿ ಸಾಹಿತಿ ರೋಶು ಬಜ್ಪೆಯವರು ‘ಹೋಂ ಸ್ವೀಟ್ ಹೋಂ’ ಎಂದು ಅನುವಾದಿಸಿದ್ದು, ಅಸ್ತಿತ್ವ(ರಿ) ಮಂಗಳೂರು ಕಲಾವಿದರು ಪಾದುವ ಕಾಲೇಜು ಸಭಾಂಗಣದಲ್ಲಿ ಪ್ರದರ್ಶಿಸಿದ್ದು, ಜನಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಆಪ್ತ ರಂಗಭೂಮಿ ಮಾದರಿಯಲ್ಲಿ ಪಾದುವಾ ರಂಗ ಅಧ್ಯಯನ ಕೇಂದ್ರದ ಸಹಕಾರದಲ್ಲಿ ಪ್ರಸ್ತುತಪಡಿಸಲಾಗಿತ್ತು. ನಾಟಕದ ಬಳಿಕ ಕೃತಿ ಹಾಗೂ ನಾಟಕದ ಬಗ್ಗೆ ಸಂವಾದ ಏರ್ಪಡಿಸಲಾಗಿತ್ತು. ಸಾಹಿತಿಗಳು, ನಾಟಕಕಾರರು ಮತ್ತು ನೂತನವಾಗಿ ನೇಮಕಗೊಂಡ ದ.ಕ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನಾ ಅವರು ಈ ಸಂದರ್ಭ ಉಪಸ್ಥಿತರಿದ್ದರು.
ದ.ಕ ಜಿಲ್ಲೆಯಿಂದ ರಾಜ್ಯದ ವಿವಿಧೆಡೆಯ ಪ್ರಸಕ್ತ ವರ್ಷದ ರಂಗ ತರಬೇತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿ ಸನ್ಮಾನಿಸಲಾಯಿತು.
ಪುತ್ತೂರು ಮಹಿಳಾ ಕಾಲೇಜು ಪ್ರಾಂಶುಪಾಲರಾದ ಕ್ಸೇವಿಯರ್ ಡಿ’ಸೊಜಾ ಅವರು ‘ಅಸ್ತಿತ್ವ’ ತಂಡಕ್ಕೆ ಶುಭ ಕೋರಿದರು. ಪಾದುವ ಕಾಲೇಜು ಪ್ರಾಂಶುಪಾಲರಾದ ವಂ. ಆಲ್ವಿನ್ ಸೆರಾವೊ ಅವರು ಕಾರ್ಯಕ್ರಮ ನಿರ್ವಹಿಸಿದರು.
ಇದು ಅಸ್ತಿತ್ವ ತಂಡದ ಮೊದಲ ನಾಟಕವಾಗಿದ್ದು, ಮುದರಂಗಡಿಯಲ್ಲಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಮೊದಲ ಪ್ರದರ್ಶನ ನೀಡಲಾಗಿತ್ತು.