ಕಾಸರಗೋಡು: ನವ ವಿವಾಹಿತ ದಂಪತಿ ಆತ್ಮಹತ್ಯೆ. ಕಾರಣ ನಿಗೂಢ

ಮೂರು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಯುವ ದಂಪತಿ

ಕರಾವಳಿ ಕರ್ನಾಟಕ ವರದಿ
ಕಾಸರಗೋಡು: ಮೂರು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಯುವ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಕಾಸರಗೋಡಿನಿಂದ ವರದಿಯಾಗಿದೆ.

ಪರ್ವನಡ್ಕದದಲ್ಲಿ ನೆಲೆಸಿದ್ದ ಜಿಶಾಂತ್ (33) ಮತ್ತು ಅವರ ಪತ್ನಿ ಜಯ (25) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಮಾರ್ಚ್ 13 ರ ಮಧ್ಯಾಹ್ನ ಇವರಿಬ್ಬರ ದೇಹ ಮನೆಯ ಮಾಡಿನಿಂದ ನೇತಾಡುತ್ತಿರುವುದನ್ನು ಗಮನಿಸಲಾಗಿತ್ತು.

ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ಇವರಿಬ್ಬರೂ ಕಳೆದೆರಡು ದಿನಗಳಿಂದ ಮನೆಯ ಹೊರಗೆ ಕಾಣಿಸಿಕೊಂಡಿರಲಿಲ್ಲ ಎನ್ನಲಾಗುತ್ತಿದೆ. ದಂಪತಿಯ ಈ ಕಠೋರ ನಿರ್ಧಾರಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Get real time updates directly on you device, subscribe now.