ಉಡುಪಿ: ಮುಂಬೈಯಿಂದ ಬಂದ ನಾಲ್ವರಿಗೆ ಕೊರೋನ ಪಾಸಿಟಿವ್

ಎಲ್ಲ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕ್ವಾರಂಟೈನ್ ನಲ್ಲಿದ್ದ ಸೋಂಕಿತರಲ್ಲಿ ಎಂಟು ವರ್ಷದ ಬಾಲಕನಲ್ಲಿಯೂ ಸೋಂಕು ದೃಢವಾಗಿದೆ,

ಕರಾವಳಿ ಕರ್ನಾಟಕ ವರದಿ
ಉಡುಪಿ: ಮುಂಬೈಯಿಂದ ಜಿಲ್ಲೆಗೆ ಆಗಮಿಸಿದ ನಾಲ್ವರಲ್ಲಿ ಇಂದು ಕೊರೋನ ಸೋಂಕು ದೃಢಪಟ್ಟಿದೆ.

ಕ್ವಾರಂಟೈನ್ ನಲ್ಲಿದ್ದ ಇಬ್ಬರು ಪುರುಷರು, ಓರ್ವ ಮಹಿಳೆ ಮತ್ತು ಎಂಟು ವರ್ಷದ ಒಬ್ಬ ಬಾಲಕನಲ್ಲಿ ಸೋಂಕು ದೃಢವಾಗಿದೆ. ಎಲ್ಲ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆ ಮತ್ತು ಓರ್ವ ಪುರುಷ ಇಪ್ಪತ್ತ್ನಾಲ್ಕು ವರ್ಷದವರಾಗಿದ್ದು ಇನ್ನೊಬ್ಬ ವ್ಯಕ್ತಿ ಮುವತ್ತೆಂಟು ವರ್ಷದವರಾಗಿದ್ದಾರೆ.

ಚಿತ್ರದುರ್ಗದಿಂದ ಕ್ಯಾನ್ಸರ್ ಚಿಕಿತ್ಸೆಗೆ ಬಂದ ಹದಿನೇಳರ ಹರಯದ ಯುವತಿಯಲ್ಲೂ ಕೊರೋನಾ ಸೋಂಕು ದೃಢಪಟ್ಟಿದ್ದು, ಆಕೆಯನ್ನೂ ಕೋವಿಡ್ ಆಸ್ಪತ್ರೆಗೆ ಸೇರಿಸುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ಐದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ವಿಡೀಯೋ ಸಂದೇಶ ನೀಡಿದ್ದಾರೆ.

Get real time updates directly on you device, subscribe now.