ಉಡುಪಿ: ಗಂಟಲು ದ್ರವ ಪರೀಕ್ಷೆ ಫಲಿತಾಂಶ ಬಾರದೇ ಕ್ವಾರಂಟೈನ್ ಕೇಂದ್ರದಲ್ಲಿರುವವರು ಅತಂತ್ರ

ಗಂಟಲು ದ್ರವ ಪರೀಕ್ಷೆಯ ಫಲಿತಾಂಶ ಬಾರದೇ 14ದಿನಗಳ ಕ್ವಾರಂಟೈನ್ ಅವಧಿ ಮುಗಿದರೂ ಮನೆಗೆ ತೆರಳುವಂತಿಲ್ಲ.

ಗಲ್ಫ್‌ನಿಂದ ಬಂದು ಹೊಟೇಲ್ ಕ್ವಾರಂಟೈನ್‌ಗೆ ಒಳಗಾಗಿ ಪ್ರತೀ ದಿನವೂ ದುಬಾರಿ ಬಾಡಿಗೆ ತೆರುತ್ತಿರುವ ಜನರು ಹಣದ ವ್ಯವಸ್ಥೆ ಹೇಗೆ ಎಂಬ ಚಿಂತೆಗೆ ಒಳಗಾಗಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಸರಕಾರಿ ಕ್ವಾರಂಟೈನ್ ಮತ್ತು ಹೊಟೇಲ್ ಕ್ವಾರಂಟೈನ್‌ಗೆ ಒಳಗಾಗಿರುವ ಹಲವರು ಕೊರೋನ ಸಂಬಂಧ ಗಂಟಲು ದ್ರವ ಪರೀಕ್ಷೆಯ ಫಲಿತಾಂಶಕ್ಕೆ ಕಾಯುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಗಂಟಲು ದ್ರವ ಪರೀಕ್ಷೆಯ ಫಲಿತಾಂಶ ಬಾರದೇ 14ದಿನಗಳ ಕ್ವಾರಂಟೈನ್ ಅವಧಿ ಮುಗಿದರೂ ಮನೆಗೆ ತೆರಳುವಂತಿಲ್ಲ. ಕೆಲವು ಕ್ವಾರಂಟೈನ್ ಕೇಂದ್ರಗಳಲ್ಲಿರುವ ಕೆಲವರಲ್ಲಿ ಕೊರೋನ ಲಕ್ಷಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಪರೀಕ್ಷೆ ಮೇ.25ರಂದೂ ಮುಂದುವರಿದಿದೆ.

ಗಲ್ಫ್‌ನಿಂದ ಬಂದು ಹೊಟೇಲ್ ಕ್ವಾರಂಟೈನ್‌ಗೆ ಒಳಗಾಗಿ ಪ್ರತೀ ದಿನವೂ ದುಬಾರಿ ಬಾಡಿಗೆ ತೆರುತ್ತಿರುವ ಜನರು ಹಣದ ವ್ಯವಸ್ಥೆ ಹೇಗೆ ಎಂಬ ಚಿಂತೆಗೆ ಒಳಗಾಗಿದ್ದಾರೆ. ಭಾರತಕ್ಕೆ ಬರುವ ಮುನ್ನ ಎರಡು ತಿಂಗಳು ಉದ್ಯೋಗವಿಲ್ಲದೇ ಪರದಾಡಿದ್ದ ಅನಿವಾಸಿ ಭಾರತೀಯರು ಇಲ್ಲಿ ಸಿಲುಕಿಕೊಂಡಿದ್ದಾರೆ. ಮಧುಮೇಹ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಸೂಕ್ತ ವೈದ್ಯಕೀಯ ಪರೀಕ್ಷೆಯ ಲಭ್ಯತೆಯೂ ಇಲ್ಲ ಎಂದು ತಿಳಿದುಬಂದಿದೆ. ಹೇಗಾದರೂ ಒಮ್ಮೆ ಮನೆ ಸೇರೋಣ ಎಂಬ ನಿರೀಕ್ಷೆಯಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿರುವ ಜನರು ಯಾವಾಗ ಗಂಟಲು ಪರೀಕ್ಷೆಯ ಫಲಿತಾಂಶ ನೀಡುತ್ತಾರೋ, ಯಾವಾಗ ತಮಗೆ ಈ ‘ಸೆರೆಮನೆ’ಯಂಥ ವಾಸದಿಂದ ಮುಕ್ತಿ ಸಿಕ್ಕೀತು ಎಂದು ಆತಂಕದಿಂದ ದಿನದೂಡುತ್ತಿದ್ದಾರೆ.

ಮುಂಬೈಯಿಂದ ಬಂದು ಸರಕಾರಿ ವಸತಿಗೃಹ, ಹಾಸ್ಟೆಲ್ ಮುಂತಾದೆಡೆ ಕ್ವಾರಂಟೈನ್‌ಗೆ ಒಳಗಾಗಿರುವ ನೂರಾರು ಜನರ ಪರಿಸ್ಥಿತಿಯೂ ಗಂಟಲು ದ್ರವ ಪರೀಕ್ಷೆ ಫಲಿತಾಂಶಕ್ಕೆ ಕಾಯುವುದೇ ಆಗಿದೆ.

 

Get real time updates directly on you device, subscribe now.