ಬಂಟ್ವಾಳ: ಜೈಶ್ರೀರಾಂ ಹೇಳುವಂತೆ ಬಾಲಕನಿಗೆ ಹಲ್ಲೆ, ಪ್ರಕರಣ ದಾಖಲು

ಜೈ ಶ್ರೀರಾಂ ಹೇಳುವಂತೆ ಬಾಲಕನೋರ್ವನಿಗೆ ಹಲ್ಲೆಗೈಯುತ್ತಿರುವ ವಿಡೀಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್.

ಕರಾವಳಿ ಕರ್ನಾಟಕ ವರದಿ
ಬಂಟ್ವಾಳ: ಜೈ ಶ್ರೀರಾಂ ಹೇಳುವಂತೆ ಬಾಲಕನೋರ್ವನಿಗೆ ಹಲ್ಲೆಗೈಯುತ್ತಿರುವ ವಿಡೀಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಲ್ಲೆಕೋರ ದುಷ್ಕರ್ಮಿ ವಿರುದ್ಧ ಮೆಲ್ಕಾರ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ.

ಕುಡ್ತಮುಗೇರುವಿನ ಬಾಲಕನೋರ್ವನಿಗೆ ಶಾಲೆಯ ಮೈದಾನದಲ್ಲಿ ಎಳೆದಾಡುತ್ತಾ ಕೆನ್ನೆಗೆ ಥಳಿಸುತ್ತಿರುವ ದುಷ್ಕರ್ಮಿಯನ್ನು ದಿನೇಶ್ ಕನ್ಯಾನ ಎಂದು ಗುರುತಿಸಲಾಗಿದೆ. ಮೂವರು ಹಲ್ಲೆಕೋರರಲ್ಲಿ ಒಬ್ಬ ಬಾಲಕನ ಗೆಳೆಯನಾಗಿದ್ದು, ಈತನೇ ಇನ್ನಿಬ್ಬರನ್ನು ಶಾಲೆ ಮೈದಾನಕ್ಕೆ ಕರೆಸಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಲಾಗಿದೆ.

ತಾಲೂಕಿನ ಸೌಹಾರ್ದತೆಗೆ ಭಂಗ ತರುವ ಇಂಥ ಘಟನೆಗೆ ಪೊಲೀಸ್ ಇಲಾಖೆ ತಕ್ಷಣ ಕ್ರಮಕೈಗೊಳ್ಳಬೇಕೆಂದು ಸಾಮಾಜಿಕ ಮಾಧ್ಯಮದಲ್ಲಿ ಜನ ಒತ್ತಾಯಿಸಿದ್ದರು.

Get real time updates directly on you device, subscribe now.