ಮಂಗಳೂರು: ಲಕ್ಷದ್ವೀಪದಲ್ಲಿ ಸಿಲುಕಿದ್ದ ಕಾರ್ಮಿಕರು ಮರಳಿ ಮಂಗಳೂರಿಗೆ

ಕಾಂಗ್ರೆಸ್ ಮುಖಂಡ ಐವನ್ ಡಿ’ಸೋಜಾ ಮತ್ತಿತರ ಸ್ಥಳೀಯ ಜನಪ್ರತಿನಿಧಿಗಳು ಕಾರ್ಮಿಕರಿಗೆ ಹೂಗುಚ್ಛ ನೀಡಿ ಹಾರ್ದಿಕವಾಗಿ ಸ್ವಾಗತಿಸಿದರು.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಕೋವಿಡ್-19 ಲಾಕ್ ಡೌನ್ ದೆಸೆಯಿಂದ ಎರಡುವರೆ ತಿಂಗಳಿನಿಂದ ಲಕ್ಷ ದ್ವೀಪದಲ್ಲಿದ್ದ ಕಾರ್ಮಿಕರನ್ನು ಇಂದು ‘ಅಮಿನ್ ದಿವಿ’ ಹಡಗಿನ ಮೂಲಕ ಮಂಗಳೂರಿಗೆ ಕರೆತರಲಾಯಿತು. ಈ ಸಂದರ್ಭ ಕಾಂಗ್ರೆಸ್ ಮುಖಂಡ ಐವನ್ ಡಿ’ಸೋಜಾ ಮತ್ತಿತರ ಸ್ಥಳೀಯ ಜನಪ್ರತಿನಿಧಿಗಳು ಕಾರ್ಮಿಕರಿಗೆ ಹೂಗುಚ್ಛ ನೀಡಿ ಹಾರ್ದಿಕವಾಗಿ ಸ್ವಾಗತಿಸಿದರು.

ಹಡಗು ಇಂದು ಮಂಗಳೂರಿನ 19 ಮಂದಿ ಕಾರ್ಮಿಕರೊಂದಿಗೆ ಹಳೆ ಬಂದರಿಗೆ ಅಗಮಿಸಿದೆ. ಕಾರ್ಮಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ.

“ಅಮಿನ್ ದಿವಿ’ ಹಡಗು ಹಳೆ ಬಂದರು ಜೆಟ್ಟಿ ಸೇರುವ ಸಂದರ್ಭ ಯು.ಕೆ.ಹುಸೈನಬ್ಬ ನೇತೃತ್ವದಲ್ಲಿ ಹಡಗು ತಂಗಲು ಸೂಕ್ತ ಸ್ಥಳಾವಕಾಶ ಕಲ್ಪಿಸಲಾಯಿತು.

Get real time updates directly on you device, subscribe now.