ಕಾಸರಗೋಡು: ಪೊಲೀಸ್ ವರಿಷ್ಠಾಧಿಕಾರಿಯಾಗಿ ಕನ್ನಡತಿ ಶಿಲ್ಪಾ ದ್ಯಾವಯ್ಯ

ಡಿ. ಶಿಲ್ಪಾ ಕನ್ನಡ ಭಾಷೆಯಲ್ಲಿ ನಿರರ್ಗಳವಾಗಿ ಮಾತಾಡಬಲ್ಲವರಾಗಿದ್ದಾರೆ.

ಕಾಸರಗೋಡು ಜಿಲ್ಲೆಯ ಪ್ರಥಮ ಮಹಿಳಾ ಎಸ್ಪಿ ಎಂಬ ಖ್ಯಾತಿಯೂ ಅವರದಾಗಿದೆ.

ಕರಾವಳಿ ಕರ್ನಾಟಕ ವರದಿ
ಕಾಸರಗೋಡು: ಜಿಲ್ಲಾ ಪೊಲೀಸ್ ಮುಖ್ಯಸ್ಥ ಪಿ.ಎಸ್.ಸಾಬು ಅವರ ದಿಢೀರ್ ವರ್ಗಾವಣೆ ಬೆನ್ನಲ್ಲೇ ಕರ್ನಾಟಕ ಮೂಲದ ಶಿಲ್ಪಾ ದ್ಯಾವಯ್ಯ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ.

ಕಳೆದ ಮಾರ್ಚ್ ತಿಂಗಳಲ್ಲಿ ಎಸ್ಪಿಯಾಗಿ ನಿಯುಕ್ತಿಗೊಂಡಿದ್ದ ಸಾಬು ಅವರನ್ನು ಆಲಪ್ಪುಝ ಜಿಲ್ಲೆಗೆ ವರ್ಗಾಯಿಸಲಾಗಿದೆ.

ಡಿ. ಶಿಲ್ಪಾ ಅವರು ಹಿಂದೆ ಕಾಸರಗೋಡು ಎ.ಎಸ್ಪಿಯಾಗಿ ಕಾರ್ಯನಿರ್ವಹಿಸಿದ ಅನುಭವಿಯಾಗಿದ್ದು, ಕನ್ನಡ ಭಾಷೆಯಲ್ಲಿ ನಿರರ್ಗಳವಾಗಿ ಮಾತಾಡಬಲ್ಲವರಾಗಿದ್ದಾರೆ.

ಕಾಸರಗೋಡು ಜಿಲ್ಲೆಯ ಪ್ರಥಮ ಮಹಿಳಾ ಎಸ್ಪಿ ಎಂಬ ಖ್ಯಾತಿಯೂ ಅವರದಾಗಿದೆ.

 

Get real time updates directly on you device, subscribe now.