ಮಂಗಳೂರು: ಕಾರು-ಲಾರಿ ಅಪಘಾತ, ಓರ್ವ ಸಾವು

ತೊಕ್ಕೊಟ್ಟಿನಿಂದ ಮಂಗಳೂರಿಗೆ ಬರುತ್ತಿದ್ದ ಕಾರು ನಿಂತ ಲಾರಿಗೆ ಗುದ್ದಿದೆ.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಜಪ್ಪಿನಮೊಗರು ಬಳಿ ರಾ.ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಓರ್ವ ಸಾವಪ್ಪಿದ್ದು, ಹಲವರು ಗಾಯಗೊಂಡ ಘಟನೆ ಇಂದು ಮುಂಜಾನೆ ಐದರ ಸುಮಾರಿಗೆ ನಡೆದಿದೆ.

ತೊಕ್ಕೊಟ್ಟಿನಿಂದ ಮಂಗಳೂರಿಗೆ ಬರುತ್ತಿದ್ದ ಕಾರು ನಿಂತ ಲಾರಿಗೆ ಗುದ್ದಿದೆ. ಈ ಸಂದರ್ಭ ಓರ್ವರು ಸ್ಥಳದಲ್ಲೇ ಸಾವಪ್ಪಿದರು. ಐವರು ಗಾಯಗೊಂಡರು. ಕಾರು ಚಾಲನೆ ಮಾಡುತ್ತಿದ್ದ ಕಾವೂರಿನ ಚೇತನ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಅಪಘಾತವಾದ ಕಾರು ಬಹುತೇಕ ಲಾರಿಯಡಿ ನುಗ್ಗಿದ್ದರಿಂದ ನಜ್ಜುಗುಜ್ಜಾಗಿದೆ.

Get real time updates directly on you device, subscribe now.