ಪುತ್ತೂರು: ಲಾಕ್‌ಡೌನ್ ಸಂಕಟ, ಬೀದಿಬದಿ ಕಬಾಬ್ ವ್ಯಾಪಾರಿ ಆತ್ಮಹತ್ಯೆ

ಲಾಕ್‌ಡೌನ್ ಸಂದರ್ಭ ತೀವೃ ಆರ್ಥಿಕ ಸಮಸ್ಯೆಗೆ ಒಳಗಾದ ಅವರು ಆರೋಗ್ಯ ಕೂಡ ಹದಗೆಟ್ಟು ಕಂಗೆಟ್ಟಿದ್ದರು.

ಕರಾವಳಿ ಕರ್ನಾಟಕ ವರದಿ
ಪುತ್ತೂರು: ಪಡೀಲು ಬಳಿ ತಳ್ಳುಗಾಡಿಯಲ್ಲಿ ಬೀದಿಬದಿ ಚಿಕನ್ ಕಬಾನ್ ಮಾರಿ ಜೀವನ ನಡೆಸುತ್ತಿದ್ದ ವ್ಯಕ್ತಿಯೋರ್ವರ ಶವ ಪುತ್ತೂರು-ಉಪ್ಪಿನಂಗಡಿ ರಸ್ತೆಯ ಪಡೀಲು ಸರಕಾರಿ ಬಾವಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಗೈದಿರಬಹುದೆಂದು ಶಂಕಿಸಲಾಗಿದೆ. ಬನ್ನೂರು ಗ್ರಾಮದ ನಂದಿಲ ನಿವಾಸಿ ವಿಠಲ ನಾಯ್ಕ್(63) ಮೃತರು.

ಕೋವಿಡ್ ಲಾಕ್‌ಡೌನ್ ಸಂದರ್ಭ ತೀವೃ ಆರ್ಥಿಕ ಸಮಸ್ಯೆಗೆ ಒಳಗಾದ ಅವರು ಇತ್ತೀಚೆಗೆ ಲಾಕ್‌ಡೌನ್ ಸಡಿಲಿಕೆ ಬಳಿಕ ಪುನ: ಅಂಗಡಿ ತೆರೆದಿದ್ದರೂ ವ್ಯಾಪಾರ ಮುಂಚಿನಂತಿರಲಿಲ್ಲ. ಹೃದಯಾಘಾತಕ್ಕೆ ಒಳಗಾದ ಬಳಿಕ ಆರೋಗ್ಯ ಕೂಡ ಹದಗೆಟ್ಟು ಕಂಗೆಟ್ಟಿದ್ದರು ಎನ್ನಲಾಗಿದೆ. ಚಿಕಿತ್ಸೆಗಾಗಿ ಒಂದು ಲಕ್ಷಕ್ಕೂ ಅಧಿಕ ವೆಚ್ಚ ಮಾಡಿದ್ದು, ಸಾಲದ ಹೊರೆಯಿಂದಲೂ ನೊಂದಿದ್ದರು.

ಜೂ.10ರ ರಾತ್ರಿ ಮನೆಯಿಂದ ಹೊರ ಹೋದವರು ಪತ್ತೆಯಾಗಿರಲಿಲ್ಲ. ಅವರ ಅಂಗಡಿ ಪಕ್ಕದ ಬಾವಿ ಕಟ್ಟೆಯಲ್ಲಿ ಚಪ್ಪಲಿ ಮತ್ತು ಲುಂಗಿ ನೋಡಿದವರು ಬಾವಿ ಪರಿಶೀಲಿಸಿದಾಗ ಶವ ಪತ್ತೆಯಾಗಿದೆ. ಅಗ್ನಿಶಾಮಕ ದಳದವರು ಮೃತದೇಹ ಮೇಲಕ್ಕೆತ್ತಿದ್ದಾರೆ.

ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ವಿಠಲ ಅಗಲಿದ್ದಾರೆ.

Get real time updates directly on you device, subscribe now.