ಲಾಕ್‌ಡೌನ್ ಸಂತ್ರಸ್ತರಿಗೆ 4 ಕೋಟಿ ರೂಪಾಯಿ ಮಿಕ್ಕಿ ಪರಿಹಾರ ವಿತರಿಸಿದ ‘ಹೆಚ್.ಆರ್.ಎಸ್’

ಜಮಾಅತೆ ಇಸ್ಲಾಮೀ ಹಿಂದ್ ದೇಶಾ ದ್ಯಂತ ಅದರಲ್ಲಿಯೂ ವಿಶೇಷವಾಗಿ ಕರ್ನಾಟಕದ ಮೂಲೆ ಮೂಲೆಯ ಲ್ಲಿಯೂ ಜಾತಿ ಮತ ಭೇದವಿಲ್ಲದೆ ತನ್ನ ಸಹಾಯ ಹಸ್ತವನ್ನು ಚಾಚಿದೆ.

ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಇದರ ಅಂಗ ಸಂಸ್ಥೆಯಾದ ಹುಮ್ಯಾನೀಟೇರಿಯನ್ ರಿಲೀಫ್ ಸೊಸೈಟಿ ಕರ್ನಾಟಕ (ಎಚ್.ಆರ್.ಎಸ್) ವತಿಯಿಂದ ರಾಜ್ಯಾದ್ಯಂತ ಒಟ್ಟು 1,57,295 ಕುಟುಂಬಗಳಿಗೆ ರೂ. 4,20,07,481 ಮೌಲ್ಯದ ಪರಿಹಾರ ಕಿಟ್‍ಗಳನ್ನು ವಿತರಿಸಲಾಗಿದೆ.

ಕರಾವಳಿ ಕರ್ನಾಟಕ ವರದಿ/ಇರ್ಷಾದ್ ವೇಣೂರು
ಮಂಗಳೂರು: ದೇಶಾದ್ಯಂತ ಜಾರಿ ಗೊಳಿಸಲಾಗಿದ್ದ ಲಾಕ್‍ಡೌನ್ ಪರಿಣಾಮದಿಂದಾಗಿ ರಾಜ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರು ಹಾಗೂ ಅಗತ್ಯವುಳ್ಳವರ  ಸಹಾಯಕ್ಕಾಗಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಇದರ ಅಂಗ ಸಂಸ್ಥೆಯಾದ ಹುಮ್ಯಾನೀಟೇರಿಯನ್ ರಿಲೀಫ್ ಸೊಸೈಟಿ ಕರ್ನಾಟಕ (ಎಚ್.ಆರ್.ಎಸ್) ವತಿಯಿಂದ ರಾಜ್ಯಾದ್ಯಂತ ಒಟ್ಟು 1,57,295 ಕುಟುಂಬಗಳಿಗೆ ರೂ. 4,20,07,481 ಮೌಲ್ಯದ ಪರಿಹಾರ ಕಿಟ್‍ಗಳನ್ನು ವಿತರಿಸಲಾಗಿದೆ ಎಂದು ಸಂಸ್ಥೆ ಪ್ರಕಟಣೆ ಯಲ್ಲಿ ತಿಳಿಸಿದೆ.

ಈ ಕುರಿತಂತೆ ಹೇಳಿಕೆ ಬಿಡುಗಡೆ ಗೊಳಿಸಿರುವ ‘ಜಮಾಅತೆ ಇಸ್ಲಾಮೀ ಹಿಂದ್’ ರಾಜ್ಯಾಧ್ಯಕ್ಷರಾದ ಡಾ. ಬೆಳಗಾಮಿ ಮುಹಮ್ಮದ್ ಸಾದ್ ಅವರು ಲಾಕ್ಡೌನ್ನಿಂದಾಗಿ ಮಧ್ಯಮ ಮತ್ತು ಬಡ ವರ್ಗದವರ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಹದಗೆಟ್ಟಿತ್ತು. ಹಸಿವು, ಪೌಷ್ಠಿಕ ಆಹಾರದ ಕೊರತೆ, ಉದ್ಯೋಗದ ನಷ್ಟ, ಅನಾರೋಗ್ಯದಿಂದ ನರಳುವಿಕೆಯಂತಹ  ಸಮಸ್ಯೆಗಳು ಬಡವರನ್ನು ಮತ್ತಷ್ಟು ಸಾವಿನ ದವಡೆಗೆ ದೂಡುತ್ತಿದೆ. ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ದೇಶಾ ದ್ಯಂತ ಅದರಲ್ಲಿಯೂ ವಿಶೇಷವಾಗಿ ಕರ್ನಾಟಕದ ಮೂಲೆ ಮೂಲೆ ಯ ಲ್ಲಿಯೂ ಜಾತಿ ಮತ ಭೇದವಿಲ್ಲದೆ ತನ್ನ ಸಹಾಯ ಹಸ್ತವನ್ನು ಚಾಚಿದೆ ಎಂದು ಹೇಳಿದ್ದಾರೆ.

ಸರಕಾರವು ಯಾರೂ ಕೂಡಾ ಹಸಿವಿನಿಂದ ತೊಂದರೆಗೊಳ ಗಾಗದಂತೆ ನೋಡಿಕೊಳ್ಳಬೇಕು. ದಿನನಿತ್ಯ ದುಡಿದು ತಿನ್ನುವ ಬಡಕೂಲಿ ಕಾರ್ಮಿಕರು, ಸಣ್ಣಪುಟ್ಟ  ಉದ್ಯಮವನ್ನು ನಡೆಸಿಕೊಂಡು ತಮ್ಮಕುಟುಂಬವನ್ನು ಸಾಕಿ ಸಲುಹುವವರ ಮೇಲೆ ಕರುಣೆ ತೋರಿ ಮತ್ತು ಕಾಳಜಿಯನ್ನು ವಹಿಸುತ್ತ ಅಂತಹವರನ್ನು ಗುರುತಿಸಿ ವಿಶೇಷ ಪ್ಯಾಕೆಜುಗಳನ್ನು  ಘೋಷಿಸ ಬೇಕು ಎಂದು ಆಗ್ರಹಿಸಿದ್ದಾರೆ.

ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಹೇಳಿಕೆಯೊಂದನ್ನು ನೀಡಿ, ಈ ಸಂದರ್ಭದಲ್ಲಿ ನಮ್ಮ ಜಮಾಅತ್ ಕಾರ್ಯಕರ್ತರು ಇನ್ನೂ ಈ ಪರಿ ಹಾರದ ಕಾರ್ಯದಲ್ಲಿ  ನಿರತರಾಗಿದ್ದಾರೆ. ಇದೇ ವೇಳೆ ನಮ್ಮನ್ನು ಆರ್ಥಿಕ, ನೈತಿಕ ಹಾಗೂ ಸಂಘಟನಾತ್ಮಕವಾಗಿ ಬೆಂಬಲಿಸಿದ ಪ್ರತಿಯೊಬ್ಬರಿಗೂ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದಿದ್ದಾರೆ.

ಎಚ್.ಆರ್.ಎಸ್. ಇದರ ರಾಜ್ಯ ನಿರ್ದೇಶಕರಾದ ಕೆ.ಎಂ. ಅಶ್ರಫ್ ಮಂಗಳೂರು ಅವರು ವಿವರಿಸಿದಂತಹ ಜಿಲ್ಲಾವಾರು ಪರಿಹಾರ ಕಿಟ್‍ಗಳ ಅಂಕಿ ಅಂಶಗಳು ಈ ಕೆಳಗಿನಂತಿವೆ.

ಸ್ಥಳ ಮತ್ತು ಒಟ್ಟು ಪರಿಹಾರ ಕಿಟ್‍ಗಳ ಸಂಖ್ಯೆ
ಬಾಗಲಕೋಟ 1207
ರಾಮನಗರ 137
ಬೆಂಗಳೂರು ನಗರ 5903
ಶಿವಮೊಗ್ಗ 2686
ಬೆಂಗಳೂರು ಗ್ರಾಮಾಂತರ 100
ತುಮಕೂರು 400
ಬೆಳಗಾವಿ 122
ಉಡುಪಿ 4242
ಬಳ್ಳಾರಿ 561
ಉತ್ತರಕನ್ನಡ 1100
ಬೀದರ್ 3000
ಯಾದಗೀರ 6200
ವಿಜಯಪೂರ 1000
ಕೊಪ್ಪಳ 1160
ಚಾಮರಾಜನಗರ 110
ಮಂಡ್ಯ 200
ಚಿಕ್ಕಮಗಳೂರು 2000
ಮೈಸೂರು 2075
ಚಿತ್ರದುರ್ಗ 251
ರಾಯಚೂರು 2000
ದಕ್ಷಿಣ ಕನ್ನಡ 2890
ಚಿಕ್ಕಬಳ್ಳಾಪುರ 100
ದಾವಣಗೆರೆ 641
ಧಾರವಾಡ 1000
ಗದಗ 160
ಕಲ್ಬುರ್ಗಿ 1000
ಹಾಸನ 1100
ಹಾವೇರಿ 250
ಕೊಡಗು 2150
ಕೋಲಾರ 500

Get real time updates directly on you device, subscribe now.