ದುಬೈ: ಅಪಘಾತದಲ್ಲಿ ಮಂಗಳೂರು ಯುವತಿ ಮೃತ್ಯು
ಶೇಖ್ ಝಯಾದ್ ರಸ್ತೆಯ ಸೇತುವೆ ಬಳಿ ಸಂಭವಿಸಿದ ಅಪಘಾತ.
ಬಸ್ಸಿನಲ್ಲಿ ಹದಿನಾಲ್ಕು ಮಂದಿ ಪ್ರಯಾಣಿಸುತ್ತಿದ್ದು ಎಲ್ಲರಿಗೂ ಗಾಯಗಳಾಗಿದ್ದವು. ಇನ್ನೋರ್ವ ವ್ಯಕ್ತಿ ಕೂಡ ಮೃತಪಟ್ಟಿದ್ದಾರೆ.
ಕರಾವಳಿ ಕರ್ನಾಟಕ ವರದಿ
ಮಂಗಳೂರು: ದುಬೈಯಲ್ಲಿ ನಡೆದ ಅಪಘಾತದಲ್ಲಿ ವೆಲೆನ್ಸಿಯಾದ ಲೂಯಿಸ್ ಮತ್ತು ದಿ. ತೆರೆಸಾ ಮೊಂತೆರೊ ಅವರ ಪುತ್ರಿ ಲುದಿನಾ(30) ಎಂಬವರು ಮೃತಪಟ್ಟಿದ್ದಾರೆ.
ಜು.12ರಂದು ಕೆಲಸ ಮಾಡುತ್ತಿದ್ದ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಸುವಾಗ ಶೇಖ್ ಝಯಾದ್ ರಸ್ತೆಯ ಸೇತುವೆ ಬಳಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಲುದಿನಾ ಚಿಕಿತ್ಸೆ ಫಲಕಾರಿಯಾಗದೇ ಸಾವಪ್ಪಿದ್ದಾರೆ.
ಬಸ್ಸಿನಲ್ಲಿ ಹದಿನಾಲ್ಕು ಮಂದಿ ಪ್ರಯಾಣಿಸುತ್ತಿದ್ದು ಎಲ್ಲರಿಗೂ ಗಾಯಗಳಾಗಿದ್ದವು. ಇನ್ನೋರ್ವ ವ್ಯಕ್ತಿ ಕೂಡ ಮೃತಪಟ್ಟಿದ್ದಾರೆ.