‘ಸರಕಾರದ ಎಲ್ಲಾ ಆರೋಗ್ಯ ಸೂಚನೆಗಳನ್ನು ಪಾಲಿಸಿ ಈದ್ ಆಚರಿಸಿ’
ಕೊರೋನಾ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಜಮಾತೆ ಇಸ್ಲಾಮಿ ಹಿಂದ್ ಮಂಗಳೂರು ವಲಯ ಸಂಚಾಲಕರ ಬಕ್ರೀದ್ ಸಂದೇಶ.
ಹಬ್ಬಕ್ಕೆ ಸಾವಿರಾರು ವರ್ಷಗಳ ಹಿನ್ನೆಲೆ ಇದೆ. ಪ್ರವಾದಿಗಳಲ್ಲಿ ಒಬ್ಬರಾದ ಇಬ್ರಾಹಿಂ ಅವರ ಮಗ ಇಸ್ಮಾಯಿಲ್ ತ್ಯಾಗ, ಬಲಿದಾನದ ನೆನಪಿಗಾಗಿ ಈ ಹಬ್ಬ.
ಕರಾವಳಿ ಕರ್ನಾಟಕ ವರದಿ
ಮಂಗಳೂರು: ಬಕ್ರೀದ್ ಹಬ್ಬದ ಮಹತ್ವ ಎಂದರೆ ಸಾವಿರಾರು ವರ್ಷಗಳ ಹಿಂದೆ ಪ್ರವಾದಿ ಇಬ್ರಾಹಿಂ ಅವರು ಮಾಡಿದ್ದ ತ್ಯಾಗ ಬಲಿದಾನದ ಸ್ಮರಣೆಯೇ ಈ ಹಬ್ಬದ ವೈಶಿಷ್ಟ್ಯ. ‘ಶಾಂತಿ ಸಮಾನತೆಯಿಂದ ಸೌಹಾರ್ದದಿಂದ ಬಾಳಬೇಕೆಂದು ಈದ್ ಸಂದೇಶ’ ಎಂದು ಜಮಾತೆ ಇಸ್ಲಾಮಿ ಹಿಂದ್ ಮಂಗಳೂರು ವಲಯ ಸಂಚಾಲಕರು ಬಕ್ರೀದ್ ಸಂದೇಶ ನೀಡಿದ್ದಾರೆ.
ಬಕ್ರೀದ್ ಹಬ್ಬವು ವಿಶ್ವಾಸಿಗಳ ಪವಿತ್ರ ಹಬ್ಬಗಳಲ್ಲಿ ಒಂದು. ಇದನ್ನು ತ್ಯಾಗ ಬಲಿದಾನದ ಹಬ್ಬ ಎಂದೂ ಕರೆಯಲಾಗುತ್ತದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಮುಸ್ಲಿಂ ಧರ್ಮೀಯರು ಈ ಹಬ್ಬವನ್ನು ಅತ್ಯಂತ ಶೃದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರುತ್ತಾರೆ. ಈ ಹಬ್ಬಕ್ಕೆ ಸಾವಿರಾರು ವರ್ಷಗಳ ಹಿನ್ನೆಲೆ ಇದೆ. ಪ್ರವಾದಿಗಳಲ್ಲಿ ಒಬ್ಬರಾದ ಇಬ್ರಾಹಿಂ ಅವರ ಮಗ ಇಸ್ಮಾಯಿಲ್ ತ್ಯಾಗ, ಬಲಿದಾನದ ನೆನಪಿಗಾಗಿ ಈ ಹಬ್ಬ ಆಚರಿಸಲಾಗುತ್ತದೆ.
ಪ್ರಸ್ತುತ ವಿಶ್ವಕ್ಕೆ ಅಂಟಿದ ಕೊರೋನ ಮಹಾಮಾರಿ ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ಅತ್ಯಂತ ಶೃದ್ದೆಯಿಂದ ಸರಕಾರ ನೀಡಿದ ಎಲ್ಲಾ ಆರೋಗ್ಯ ಸೂಚನೆಗಳನ್ನು ಪಾಲಿಸಿ ಈದ್ ಆಚರಿಸಬೇಕು ಅನಗತ್ಯ ಜನ ಸೇರುವುದು ಸುತ್ತಾಡುವುದು ಸಲ್ಲದು. ಎಲ್ಲರಿಗೂ ಈದ್ ಹಬ್ಬದ ಶುಭಾಶಯಗಳು.