‘ಹಸಿರು ಕರಾವಳಿ’: ಪಜೀರು ರಹ್ಮಾನಿಯಾ ಜುಮಾ ಮಸೀದಿ ಆವರಣದಲ್ಲಿ ತರಕಾರಿ ಬೀಜಗಳ ಬಿತ್ತನೆ

ಹಸಿರು ಕರಾವಳಿ ಅಭಿಯಾನ ಪ್ರಯುಕ್ತ ಪಜೀರು ಮಸೀದಿಯ ಖತೀಬರಾದ ಇಬ್ರಾಹಿಂ ದಾರಿಮಿ ಸಾಂಕೇತಿಕವಾಗಿ ಬೀಜ ಬಿತ್ತನೆ ಮಾಡಿದರು.

ಹಸಿರು ಕರಾವಳಿ ಅಭಿಯಾನದ ಬಂಟ್ವಾಳ ತಾಲೂಕು ಸಂಚಾಲಕ ರಿಝ್‌ವಾನ್ ಅಝ್‌ಹರಿ ಅಭಿಯಾನದ ಮಹತ್ವ ಮತ್ತು ಅನಿವಾರ್ಯತೆ ಬಗ್ಗೆ ಮಾತನಾಡಿದರು.

ಕರಾವಳಿ ಕರ್ನಾಟಕ ವರದಿ/ ಅಶೀರುದ್ದೀನ್ ಮಂಜನಾಡಿ
ಮಂಗಳೂರು: ‘ಹಸಿರು ಕರಾವಳಿ ಅಭಿಯಾನ -2020’ ಅಂಗವಾಗಿ ಪಜೀರು ರಹ್ಮಾನಿಯಾ ಜುಮಾ ಮಸೀದಿ ಆವರಣದಲ್ಲಿ ತರಕಾರಿ ಬೀಜಗಳ ಬಿತ್ತನೆ ಮತ್ತು ಗಿಡ ವಿತರಣೆ ಕಾರ್ಯಕ್ರಮ ನಡೆಯಿತು.

ಹಸಿರು ಕರಾವಳಿ ಅಭಿಯಾನದ ಬಂಟ್ವಾಳ ತಾಲೂಕು ಸಂಚಾಲಕ ರಿಝ್‌ವಾನ್ ಅಝ್‌ಹರಿ ಸದ್ರಿ ಅಭಿಯಾನದ ಮಹತ್ವ ಮತ್ತು ಅನಿವಾರ್ಯತೆಯ ಬಗ್ಗೆ ಮಾತನಾಡಿದರು.

ಪಜೀರು ಮಸೀದಿಯ ಖತೀಬರಾದ ಇಬ್ರಾಹಿಂ ದಾರಿಮಿ ಸಾಂಕೇತಿಕವಾಗಿ ಬೀಜ ಬಿತ್ತನೆ ಮಾಡಿದರು.

ಹ್ಯೂಮನ್ ಫೌಂಡೇಶನ್‌ನ ನಾಸಿರ್ ಅಹ್ಮದ್ ಸಾಮಣಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.

ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಬ್ದುರ್ರಝಾಕ್ ಪಜೀರ್, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಉಮರ್ ಪಜೀರ್,ಮದ್ರಸಾ ಅಧ್ಯಾಪಕ  ಅಬ್ದುಲ್ ಖಾದರ್ ದಾರಿಮಿ, ಹಸಿರು ಕರಾವಳಿ ಅಭಿಯಾನದ ಜಿಲ್ಲಾ ಸಂಚಾಲಕ ಅಶೀರುದ್ದೀನ್ ಮಂಜನಾಡಿ, ಮಸೀದಿಯ ಖಾದಿಮ್ ಶುಕೂರ್ ಸುರಿಬೈಲ್, ಪಜೀರು ವಲಯಯುವ ಕಾಂಗ್ರೆಸಿನ ಅಧ್ಯಕ್ಷ ಹಮೀದ್ ಪೆರ್ಣಪಾಡಿ,ಮುತಾಹರ್ ಪಾಣೆಮಂಗಳೂರು ಮುಂತಾದವರು ಉಪಸ್ಥಿತರಿದ್ದರು.

ಲೇಖಕ ಇಸ್ಮತ್ ಪಜೀರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Get real time updates directly on you device, subscribe now.