ಪುತ್ತೂರು: ಸ್ಕೂಟಿ ಸ್ಕಿಡ್, ಸವಾರ ಸ್ಥಳದಲ್ಲೇ ಸಾವು

ಡಿಯೊ ಸ್ಕಿಡ್ ಆಗಿ ಉರುಳಿ ಬಿದ್ದಾಗ ತಲೆಗೆ ಗಂಭೀರ ಏಟು ಬಿದ್ದು ಸಾವಪ್ಪಿದ್ದಾರೆ.

ಮೋಹಿತ್ ಅವರು ಈಶ್ವರ ಮಂಗಲ ಬಿಜೆಪಿ ಬೂತ್ ಸಹ ಸಂಚಾಲಕರಾಗಿದ್ದರು.

ಕರಾವಳಿ ಕರ್ನಾಟಕ ವರದಿ
ಪುತ್ತೂರು: ತಾಲೂಕಿನ ಹೊರವಲಯದ ಈಶ್ವರಮಂಗಲ ಎಂಬಲ್ಲಿ ಸ್ಕೂಟಿ ಸ್ಕಿಡ್ ಆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.

ಈಶ್ವರಮಂಗಲ ಬಳಿ ಬೆಳ್ಳಿಚಡವು ಬಳಿ ಮೋಹಿತ್ ಗೌಡ(19) ಅವರು ಚಲಾಯಿಸುತ್ತಿದ್ದ ಡಿಯೊ ಸ್ಕಿಡ್ ಆಗಿ ಉರುಳಿ ಬಿದ್ದಾಗ ತಲೆಗೆ ಗಂಭೀರ ಏಟು ಬಿದ್ದು ಸಾವಪ್ಪಿದ್ದಾರೆ.

ಈಶ್ವರ ಮಂಗಲ ನಿವಾಸಿ ಲಿಂಗಪ್ಪ ಗೌಡರ ಮಗ ಮೋಹಿತ್ ಅವರು ಈಶ್ವರ ಮಂಗಲ ಬಿಜೆಪಿ ಬೂತ್ ಸಹ ಸಂಚಾಲಕರಾಗಿದ್ದರು.

ಈಶ್ವರಮಂಗಲ ಹೊರಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.