ಜ್ಯೂನಿಯರ್ ಫ್ರೆಂಡ್ಸ್ ಜೋಕಟ್ಟೆ ವತಿಯಿಂದ ಕ್ರೀಡಾಕೂಟ

ಅಮೀನ್ ಜೋಕಟ್ಟೆ ಮತ್ತು ನೌಫಲ್ ಜೋಕಟ್ಟೆ ನೇತೃತ್ವದಲ್ಲಿ ನಡೆದ ಕ್ರೀಡಾಕೂಟ.

ಹಗ್ಗಜಗ್ಗಾಟ, ಬಾಸ್ಕೇಟ್ ಬಾಲ್, ಸೈಕಲ್ ಬ್ಯಾಲೆನ್ಸ್  ಕ್ರೀಡೆಗಳನ್ನು ಅಯೋಜಿಸಿ ವಿಜೇತ ಮಕ್ಕಳಿಗೆ  ಬಹುಮಾನ ವಿತರಿಸಲಾಯಿತು.

ಕರಾವಳಿ ಕರ್ನಾಟಕ ವರದಿ
ಜೋಕಟ್ಟೆ : ಜ್ಯೂನಿಯರ್ ಫ್ರೆಂಡ್ಸ್ ಜೋಕಟ್ಟೆ ವತಿಯಿಂದ ಮಕ್ಕಳಿಗೆ ಕ್ರೀಡಾಕೂಟವು ಜೋಕಟ್ಟೆ ಶಾಲಾ ಮೈದಾನದಲ್ಲಿ ನಡೆಯಿತು.

ಅಮೀನ್ ಜೋಕಟ್ಟೆ ಮತ್ತು ನೌಫಲ್ ಜೋಕಟ್ಟೆ ನೇತೃತ್ವದಲ್ಲಿ ನಡೆದ ಕ್ರೀಡಾಕೂಟದಲ್ಲಿ ಸುಮಾರು ನೂರಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು.

ಹಗ್ಗಜಗ್ಗಾಟ, ಬಾಸ್ಕೇಟ್ ಬಾಲ್, ಸೈಕಲ್ ಬ್ಯಾಲೆನ್ಸ್  ಹಾಗೂ ಇನ್ನೀತರ ಕ್ರೀಡೆಗಳನ್ನು ಅಯೋಜಿಸಿ ವಿಜೇತ ಮಕ್ಕಳಿಗೆ  ಬಹುಮಾನ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ  ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ರಫೀಕ್ ಜೋಕಟ್ಟೆ ಮತ್ತು ಪರ್ವೆಝ್ ಅಲಿ ,ಝುಬೈರ್ ಜೋಕಟ್ಟೆ ,ಝೀಯಾದ್ ,ಮುಶೀರ್ ತೌಸೀಫ್, ಸಿದ್ದೀಕ್, ಮುಸ್ತಫ ಮುಂತಾದವರು ಉಪಸ್ಥಿತರಿದ್ದರು.

Get real time updates directly on you device, subscribe now.