ಕಾರಿನ ಗಾಜು ಒಡೆದು ಕಳ್ಳತನ: ಪಾಸ್ಪೋರ್ಟ್ ಕಳೆದುಕೊಂಡ ದುಬೈಗೆ ತೆರಳಲಿದ್ದ ಯುವಕ

ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚೇತನ್ ಅವರು ಶುಕ್ರವಾರ ದುಬೈಗೆ ತೆರಳುವವರಿದ್ದರು.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ಕಾರಿನ ಗಾಜು ಒಡೆದು ಕಾರಿನಲ್ಲಿದ್ದ ಇಪ್ಪತ್ತು ಸಾವಿರ ರೂ. ನಗದು, ನಲವತ್ತು ಸಾವಿರ ರೂ. ಮೌಲ್ಯದ ವಿದೇಶಿ ಕರೆನ್ಸಿ ದೋಚಿದ ಘಟನೆ ಉರ್ವದಲ್ಲಿ ನಡೆದಿದೆ.

ಚೇತನ್ ಕುಮಾರ್ ಕದ್ರಿ ಎಂಬವರು ಶಿರಡಿ ಸಾಯಿ ಬಾಬಾ ಮಂದಿರ ಮುಂಭಾಗ ಕಾರು ನಿಲ್ಲಿಸಿ ಮಂದಿರಕ್ಕೆ ಹೋಗಿದ್ದಾಗ ದುಷ್ಕರ್ಮಿಗಳ ತಂಡ ಕಾರಿನ ಗಾಜು ಒಡೆದು ನಗದು, ಪಾಸ್ಪೋರ್ಟ್, ಎಟಿಎಮ್, ಆಧಾರ್ ಕಾರ್ಡ್ ಮುಂತಾದವುಗಳನ್ನು ದೋಚಿದೆ.

ಚೇತನ್ ಅವರು ಶುಕ್ರವಾರ ದುಬೈಗೆ ತೆರಳುವವರಿದ್ದರು.

ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉರ್ವ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Get real time updates directly on you device, subscribe now.