ಮಾನವಹಕ್ಕುಗಳ ಪ್ರತಿಪಾದಕ, ನಿವೃತ್ತ ನ್ಯಾಯಮೂರ್ತಿ ಹೊಸಬೆಟ್ಟು ಸುರೇಶ್ ನಿಧನ

ಗೋಧ್ರಾ ಹತ್ಯಾಕಾಂಡದ ಬಗ್ಗೆ ಜಸ್ಟೀಸ್ ಸುರೇಶ್, ಜಸ್ಟೀಸ್ ಪಿ.ಬಿ ಸಾವಂತ್, ಜಸ್ಟೀಸ್ ವಿ. ಆರ್. ಕೃಷ್ಣ ಅಯ್ಯರ್ ಅವರ ಖಾಸಗಿ ಸಮಿತಿ ಮಾನವೀಯತೆ ವಿರುದ್ಧ ಅಪರಾಧ(‘ಕ್ರೈಂ ಎಗೇನೆಸ್ಟ್ ಹ್ಯೂಮಾನಿಟಿ’) ವರದಿ ಸಲ್ಲಿಸಿತ್ತು.

ಕರಾವಳಿ ಕರ್ನಾಟಕ ವರದಿ
ಮುಂಬೈ: ಮುಂಬೈ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೊಸಬೆಟ್ಟು ಸುರೇಶ್(91) ನಿಧನರಾಗಿದ್ದಾರೆ. ಪುತ್ರ, ಇಬ್ಬರು ಪುತ್ರಿಯರನ್ನು, ಅಭಿಮಾನಿ ಬಳಗವನ್ನು ಅಗಲಿದ್ದಾರೆ.

ಗೋಧ್ರಾ ಹತ್ಯಾಕಾಂಡದ ಬಗ್ಗೆ ಜಸ್ಟೀಸ್ ಸುರೇಶ್, ಜಸ್ಟೀಸ್ ಪಿ.ಬಿ ಸಾವಂತ್, ಜಸ್ಟೀಸ್ ವಿ. ಆರ್. ಕೃಷ್ಣ ಅಯ್ಯರ್ ಅವರ ಖಾಸಗಿ ಸಮಿತಿ ಮಾನವೀಯತೆ ವಿರುದ್ಧ ಅಪರಾಧ(‘ಕ್ರೈಂ ಎಗೇನೆಸ್ಟ್ ಹ್ಯೂಮಾನಿಟಿ’) ವರದಿ ಸಲ್ಲಿಸಿತ್ತು.

ಸುರತ್ಕಲ್ ಹೊಸಬೆಟ್ಟುವಿನವರಾಗಿದ್ದ ಜಸ್ಟೀಸ್ ಸುರೇಶ್ ಅವರು ಸುರತ್ಕಲ್ ವಿದ್ಯಾದಾಯಿನಿ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ. ಊರಿಗೆ ಬಂದ ಸಂದರ್ಭ ವಿದ್ಯಾದಾಯಿನಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ಕೊಡುತ್ತಿದ್ದರು. ಈ ಸಂದರ್ಭ ಉಪನ್ಯಾಸ ನೀಡುತ್ತಿದ್ದರು. ಕಳೆದ ನವೆಂಬರ್‌ನಲ್ಲಿ ವಿದ್ಯಾದಾಯಿನಿ ಪ್ರೌಢಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲೂ ಭಾಗವಹಿಸಿ ಮಾತಾಡಿದ್ದರು.

‘ಆಲ್ ಹ್ಯೂಮನ್ ರೈಟ್ಸ್ ಆರ್ ಫಂಡಮೆಂಟಲ್ ರೈಟ್ಸ್’ ಎಂಬ ಕಾನೂನು ಪುಸ್ತಕವನ್ನೂ ಅವರು ಬರೆದಿದ್ದು, ಮಾನವಹಕ್ಕುಗಳ ಪ್ರತಿಪಾದಕರಾಗಿದ್ದರು.

 

Get real time updates directly on you device, subscribe now.