ಕೊಲೆ ಪ್ರಕರಣದ ದೋಷಿ ಸಿಪಿಐ(ಎಂ) ನಾಯಕನಿಗೆ ಸಿಎಂ ಪಿಣರಾಯಿ ಅಂತಿಮ ನಮನ

ಪಕ್ಷ ತೊರೆದ ಚಂದ್ರಶೇಖರನ್ ಅವರನ್ನು 51ಬಾರಿ ಇರಿದು ಕೊಲೆಗೈದ ಪ್ರಕರಣದಲ್ಲಿ ಕುಂಜನಾಥನ್ ದೋಷಿ.

ಕರಾವಳಿ ಕರ್ನಾಟಕ ವರದಿ
ಕೊಚ್ಚಿ: ಕೊಲೆ ಪ್ರಕರಣವೊಂದರಲ್ಲಿ ಅಪರಾಧಿಯಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸಿಪಿಐ(ಎಂ) ನಾಯಕರೋರ್ವರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಸಿಪಿಎಂ ನಾಯಕರು ಅಂತಿಮ ನಮನ ಸಲ್ಲಿಸಿದ್ದಾರೆ.

ಪಕ್ಷವನ್ನು ಪ್ರೀತಿಸಿದ ಕಾಮ್ರೇಡ್ ಸಮಾಜಮುಖಿ ಕಾಳಜಿ ಹೊಂದಿದ್ದರು. ಪಾನೂರಿನಲ್ಲಿ ಜನರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಸಿಎಂ ಪಿಣರಾಯಿ ಅವರು ಅಗಲಿದ ಸಿಪಿಎಂ ಮುಖಂಡರ ಬಗ್ಗೆ ಹೇಳಿದ್ದಾರೆ.

ಸಿಪಿಎಂ ಮುಖಂಡರಾಗಿದ್ದ ಪಿ.ಕೆ. ಕುಂಜನಾಥನ್(72) ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದು, ತಿರುವನಂತಪುರಂ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದ್ದರು.

ಸಿಪಿಐ(ಎಂ) ಬಂಡಾಯ ನಾಯಕ ಟಿ.ಪಿ.ಚಂದ್ರಶೇಖರನ್ ಕೊಲೆ ಪ್ರಕರಣದಲ್ಲಿ ಪಿ.ಕೆ ಮತ್ತು ಇತರ ಹನ್ನೊಂದು ಮಂದಿ ದೋಷಿಗಳಾಗಿದ್ದರು. ಪಕ್ಷ ತೊರೆದ ಚಂದ್ರಶೇಖರನ್ ಅವರನ್ನು 51ಬಾರಿ ಇರಿದು ಕೊಲೆಗೈದ ಪ್ರಕರಣದಲ್ಲಿ ಕುಂಜನಾಥನ್ ದೋಷಿ. ಅವರ ನಿಧನಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನುಡಿನಮನ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆಗೆ ಒಳಗಾಗಿದೆ.

ಕ್ರಾಂತಿಕಾರಿ ಸಂಗಾತಿ ಯಾವತ್ತೂ ಸಾಯುವುದಿಲ್ಲ ಮುಂತಾದ ಘೋಷಣೆಗಳನ್ನು ಅನೇಕ ಪ್ರಮುಖ ಸಿಪಿಎಂ ಮುಖಂಡರು ಅವರ ಅಂತಿಮ ವಿದಾಯದ ಸಂದರ್ಭ ಹೇಳಿದ್ದರು.

Get real time updates directly on you device, subscribe now.