ಪ್ರತಾಪಚಂದ್ರ ಶೆಟ್ಟಿಗೆ ಸಚಿವ ಸ್ಥಾನಕ್ಕಾಗಿ ಆಗ್ರಹ: ಸಿಟ್ಟಾದ ಪರಮೇಶ್ವರ್ ಹೇಳಿದ್ದೇನು?

ಒತ್ತಾಯಿಸಲು ಬಂದ ಕಾರ್ಯಕರ್ತರ ಮೇಲೆ ಉಪಮುಖ್ಯಮಂತ್ರಿ ಪರಮೇಶ್ವರ್ ಸಿಟ್ಟು

Supporters of MLC Pratap Chandra Shetty staged a protest outside DyCM G Parameshwara’s residence on Sunday. The protesters wanted Shetty included in the cabinet.

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಲು ಬಂದ ಕಾರ್ಯಕರ್ತರ ಮೇಲೆ ಉಪಮುಖ್ಯಮಂತ್ರಿ ಪರಮೇಶ್ವರ್ ಸಿಟ್ಟಾಗಿದ್ದಾರೆ.

ಸಚಿವ ಸ್ಥಾನಕ್ಕೆ ಕೇಳಲು ಬರುವ ಉತ್ಸಾಹ ಶಾಸಕರನ್ನು ಗೆಲ್ಲಿಸೋದರಲ್ಲಿ ಇರಬೇಕಿತ್ತು ಎಂದು ಕಾರ್ಯಕರ್ತರಿಗೆ ಪರಮೇಶ್ವರ್ ಹೇಳಿದ್ದಾರೆ.

ಎಂಎಲ್‍ಸಿ ಪ್ರತಾಪ್‍ಚಂದ್ರ ಶೆಟ್ಟಿ ಪರ ಧರಣಿ ನಡೆಸುತ್ತಿದ್ದ ಕಾರ್ಯಕರ್ತರೊಬ್ಬರಿಗೆ ಬುಡ ಸಮೇತ ಮರ ಕಿತ್ತು ಹಾಕಿ ಈಗ ಸಚಿವ ಸ್ಥಾನ ಕೇಳಲು ಬಂದಿದ್ದೀರಾ ಎಂದು ಪರಮೇಶ್ವರ್ ಪ್ರಶ್ನೆ ಮಾಡಿದರು.

ಪ್ರತಾಪಚಂದ್ರ ಶೆಟ್ಟಿ ಅವರ ಹೆಸರು ಸಚಿವ ಸ್ಥಾನದಲ್ಲಿ ಕೇಳಿ ಬರುತ್ತಿತ್ತು. ಆದ್ರೆ ಕೊನೆ ಘಳಿಗೆಯಲ್ಲಿ ಸಚಿವ ಸ್ಥಾನ ತಪ್ಪಿದೆ. ಸಚಿವ ಸ್ಥಾನ ತಪ್ಪಲು ಹಲವು ಲಾಬಿ ನಡೆಸಿವೆ. ನಮ್ಮ ನಾಯಕರಿಗೆ ಸಚಿವ ಸ್ಥಾನ ನೀಡಬೇಕೆಂದು ಪಕ್ಷದ ಅಧ್ಯಕ್ಷರಿಗೆ ಮನವಿಯನ್ನು ಸಲ್ಲಿಸಿದ್ದೇವೆ. ಒಂದು ವೇಳೆ ನಮ್ಮ ನಾಯಕರಿಗೆ ಸಚಿವ ಸ್ಥಾನ ಸಿಗದಿದ್ದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತೇವೆ ಎಂದು ಪ್ರತಾಪಚಂದ್ರ ಶೆಟ್ಟಿ ಅವರ ಬೆಂಬಲಿಗ ಶಿವಾನಂದ್ ಶೆಟ್ಟಿ ಹೇಳಿದ್ದಾರೆ.

Get real time updates directly on you device, subscribe now.