ಉಡುಪಿ: ಜಿಲ್ಲೆಯಲ್ಲೇ ಪ್ರಥಮ ಬಾರಿ ಹೆಬ್ರಿಯಲ್ಲಿ ಲಾಜ್ ಸೀಲ್ ಡೌನ್
ಮುಂಬೈಯಿಂದ ಬಂದು ಹೊಟೇಲ್ ಕ್ವಾರಂಟೈನ್ನಲ್ಲಿದ್ದ ಇಬ್ಬರು ಮಹಿಳೆಯರಲ್ಲಿ ಕೊರೋನಾ ಸೋಂಕು ಪತ್ತೆ ಹಿನ್ನೆಲೆ.
ಹೆಬ್ರಿಯ ಈ ರೆಸಿಡೆನ್ಸಿ ಮತ್ತು ಸಂಪರ್ಕ ರಸ್ತೆಯನ್ನು ಮುನ್ನೂರು ಮೀಟರ್ನಷ್ಟು ಸೀಲ್ ಡೌನ್ ಮಾಡಲಾಗಿದ್ದು, ಸಾರ್ವಜನಿಕರಿಗೆ ಈ ಪ್ರದೇಶದಲ್ಲಿ ಓಡಾಟ ನಿರ್ಬಂಧಿಸಲಾಗಿದೆ
ಕರಾವಳಿ ಕರ್ನಾಟಕ ವರದಿ
ಹೆಬ್ರಿ: ಮುಂಬೈಯಿಂದ ಬಂದು ಹೊಟೇಲ್ ಕ್ವಾರಂಟೈನ್ನಲ್ಲಿದ್ದ ಇಬ್ಬರು ಮಹಿಳೆಯರಲ್ಲಿ ಕೊರೋನಾ ಸೋಂಕು ಪತ್ತೆ ಹಿನ್ನೆಲೆಯಲ್ಲಿ ಈ ಪ್ರದೇಶ ಮತ್ತು ಹೆಬ್ರಿಯ ಕುಚ್ಚೂರು ರಸ್ತೆ ಸೀಲ್ ಡೌನ್ ಮಾಡಲಾಗಿದೆ.
ಮುಂಬೈಯಿಂದ ಬಂದ ಮಹಿಳೆಯರು ಕೊರೋನಾ ಪೊಸಿಟಿವ್ ಆದ ಹಿನ್ನೆಲೆಯಲ್ಲಿ ಅವರನ್ನು ಉಡುಪಿ ಜಿಲ್ಲಾಡಳಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಿದೆ. ಮುವತ್ತೊಂದು ವರ್ಷ ಮಹಿಳೆಗೆ ಇಪ್ಪತ್ತೊಂದು ಮಂದಿ ಮತ್ತು ನಲತ್ತೇಳು ವಯಸ್ಸಿನ ಮಹಿಳೆಗೆ ಹನ್ನೆರಡು ಮಂದಿ ಪ್ರಥಮ ಸಂಪರ್ಕಿತರನ್ನು ಗುರುತಿಸಲಾಗಿದ್ದು, ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ.
ಹೆಬ್ರಿಯಲ್ಲಿ ಮುನ್ನೂರು ಮೀಟರ್ನಷ್ಟು ಸೀಲ್ ಡೌನ್ ಮಾಡಲಾಗಿದ್ದು, ಸಾರ್ವಜನಿಕರಿಗೆ ಈ ಪ್ರದೇಶದಲ್ಲಿ ಓಡಾಟ ನಿರ್ಬಂಧಿಸಲಾಗಿದೆ.