ಉಡುಪಿ: 27 ಮಂದಿ ಕೊರೋನಾ ಪೊಸಿಟಿವ್
ಹೊರ ರಾಜ್ಯಗಳಿಂದ ಉಡುಪಿಗೆ ಬಂದವರಲ್ಲಿ ಇಪ್ಪತ್ತೇಳು ಮಂದಿಯಲ್ಲಿ ಗುರುವಾರ ಬೆಳಗಿನ ವರದಿಯಲ್ಲಿ ಕೊರೋನ ಸೋಂಕು
ಕೊರೋನ ಪೊಸಿಟಿವ್ ಬಂದ ಇಪ್ಪತ್ತೇಳು ಮಂದಿಯಲ್ಲಿ ಇಪ್ಪತ್ನಾಲ್ಕು ಮಂದಿಯನ್ನು ಡಾ.ಟಿ.ಎಂ.ಎ.ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.
ಕರಾವಳಿ ಕರ್ನಾಟಕ ವರದಿ
ಉಡುಪಿ: ಹೊರ ರಾಜ್ಯಗಳಿಂದ ಉಡುಪಿಗೆ ಬಂದವರಲ್ಲಿ ಇಪ್ಪತ್ತೇಳು ಮಂದಿಯಲ್ಲಿ ಗುರುವಾರ ಬೆಳಗಿನ ವರದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಕೊರೋನ ಸೋಂಕು ಹದಿನಾರು ಮಕ್ಕಳು, ಆರು ಪುರುಷರು, ಐವರು ಮಹಿಳೆಯರಲ್ಲಿ ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಇಪ್ಪತ್ಮೂರು ಮಂದಿ, ತೆಲಂಗಾಣದ ಮೂವರು ಬಂದಿದ್ದರು. ಮತ್ತೊಬ್ಬರು ಕೇರಳದಿಂದ ಮಣಿಪಾಲ ಕೆ.ಎಂ.ಸಿಗೆ ಚಿಕಿತ್ಸೆಗೆ ಬಂದಿದ್ದು, ಕೊರೋನ ಸೋಂಕು ಪತ್ತೆಯಾಗಿದೆ.
ಕೊರೋನ ಪೊಸಿಟಿವ್ ಬಂದ ಇಪ್ಪತ್ತೇಳು ಮಂದಿಯಲ್ಲಿ ಇಪ್ಪತ್ನಾಲ್ಕು ಮಂದಿಯನ್ನು ಡಾ.ಟಿ.ಎಂ.ಎ.ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಕೇರಳದಿಂದ ಬಂದವರಿಗೆ ಕೆ.ಎಂ.ಸಿ ಆಸ್ಪತ್ರೆಯ ಐಸೋಲೇಶನ್ ವಾರ್ಡ್ ನಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ಡಿಸಿ ಜಗದೀಶ್ ವಿಡೀಯೋ ಸಂದೇಶದಲ್ಲಿ ತಿಳಿಸಿದ್ದಾರೆ.