ಮೂಡುಬಿದಿರೆ: ಕ್ವಾರಂಟೈನ್ನಲ್ಲಿ ಆತ್ಮಹತ್ಯೆಗೈದ ವ್ಯಕ್ತಿಗೆ ಕೊರೋನ ದೃಢ
ಕ್ವಾರಂಟೈನ್ಗೆ ಒಳಗಾದ ಎರಡೇ ಗಂಟೆಗಳಲ್ಲಿ ಆತ್ಮಹತ್ಯೆಗೈದ ವ್ಯಕ್ತಿಗೆ ಕೋವಿಡ್ ಇರುವುದು ಪತ್ತೆಯಾಗಿದೆ.
ಮುಂಬೈಯಿಂದ ಬಂದಿದ್ದ ಕಡಂದಲೆಯ ವ್ಯಕ್ತಿ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಆತ್ಮಹತ್ಯೆಗೈದಿದ್ದರು.
ಕರಾವಳಿ ಕರ್ನಾಟಕ ವರದಿ
ಮೂಡುಬಿದಿರೆ: ಕೊರೋನಾ ಭೀತಿ ಮತ್ತು ಭವಿಷ್ಯದ ಕುಟುಂಬ ನಿರ್ವಹಣೆಯ ಆತಂಕದಿಂದ ಕ್ವಾರಂಟೈನ್ಗೆ ಒಳಗಾದ ಎರಡೇ ಗಂಟೆಗಳಲ್ಲಿ ಆತ್ಮಹತ್ಯೆಗೈದ ವ್ಯಕ್ತಿಗೆ ಕೋವಿಡ್ ಇರುವುದು ಪತ್ತೆಯಾಗಿದೆ.
ಮೃತರ ಗಂಟಲು ದ್ರವ ಪರೀಕ್ಷೆಯನ್ನು ನಡೆಸಲಾಗಿದ್ದು, ಕೊರೋನಾ ಪಾಸಿಟಿವ್ ವರದಿ ಬಂದಿದೆ.
ಮುಂಬೈಯಿಂದ ಬಂದಿದ್ದ ಕಡಂದಲೆಯ ವ್ಯಕ್ತಿ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಆತ್ಮಹತ್ಯೆಗೈದಿದ್ದರು.
ಮೃತರ ಅಂತ್ಯಕ್ರಿಯೆಯನ್ನು ಬೋಳೂರು ರುದ್ರಭೂಮಿಯಲ್ಲಿ ಸರಕಾರಿ ಮಾರ್ಗಸೂಚಿ ಅನ್ವಯ ನಡೆಸಲಾಗಿದೆ.