36 ಗಂಟೆ ಕರ್ಪ್ಯೂ, ಹೊರಗೆ ಬಂದರೆ ಲಾಠಿ ಪೆಟ್ಟು: ಡಿಸಿ ಜಗದೀಶ್
ಮೇ.23ರ ಸಂಜೆ ಏಳು ಗಂಟೆಯಿಂದ ಮೇ.25ರ ಬೆಳಿಗ್ಗೆ ಏಳು ಗಂಟೆ ತನಕ ಪೂರ್ತಿ ಲಾಕ್ಡೌನ್ ಇದ್ದು ಮನೆಯಿಂದ ಯಾವುದೇ ಕಾರಣಕ್ಕೆ ಹೊರಗೆ ಬಂದರೆ ಲಾಠಿಗಳು ಮಾತನಾಡುತ್ತವೆ.
ಸಂಪೂರ್ಣ ಲಾಕ್ಡೌನ್ ಅವಧಿಯಲ್ಲಿ ಯಾರು ಕೂಡ ಮನೆಯಿಂದ ಹೊರಬರಬಾರದು ಎಂದು ಸುದ್ದಿಗೋಷ್ಠಿ ಸಂದರ್ಭ ಎಚ್ಚರಿಕೆ.
ಕರಾವಳಿ ಕರ್ನಾಟಕ ವರದಿ
ಉಡುಪಿ: ಜಿಲ್ಲೆಯಲ್ಲಿ ಮೇ.23ರ ಸಂಜೆ ಏಳು ಗಂಟೆಯಿಂದ ಮೇ.25ರ ಬೆಳಿಗ್ಗೆ ಏಳು ಗಂಟೆ ತನಕ ಪೂರ್ತಿ ಲಾಕ್ಡೌನ್ ಇದ್ದು ಮನೆಯಿಂದ ಯಾವುದೇ ಕಾರಣಕ್ಕೆ ಹೊರಗೆ ಬಂದರೆ ನಮ್ಮ ಲಾಠಿಗಳು ಮಾತನಾಡುತ್ತವೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಜನರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಪತ್ರಿಕೆ, ಹಾಲು, ಔಷಧ ಅಂಗಡಿಗಳನ್ನು ಹೊರತುಪಡಿಸಿ ಯಾವುದೇ ಅಂಗಡಿಗಳನ್ನು ರವಿವಾರ ತೆರೆಯುವಂತಿಲ್ಲ. ಮುಂದಿನ ಮುವತ್ತಾರು ಗಂಟೆಗಳಿಗೆ ಬೇಕಾಗುವ ಸಾಮಗ್ರಿ ಇಂದು ಸಂಜೆ ಏಳು ಗಂಟೆಯ ಒಳಗೆ ಖರೀದಿಸಬೇಕು. ಯಾವುದೇ ಕಾರಣಕ್ಕೂ ಸಂಪೂರ್ಣ ಲಾಕ್ಡೌನ್ ಅವಧಿಯಲ್ಲಿ ಯಾರು ಕೂಡ ಮನೆಯಿಂದ ಹೊರಬರಬಾರದು, ತಪ್ಪಿದಲ್ಲಿ ಕಠಿಣ ಪೊಲೀಸ್ ಕ್ರಮ ಎದುರಿಸಬೇಕಾಗುತ್ತದೆ ಎಂದು ಮಣಿಪಾಲ ರಜತಾದ್ರಿಯಲ್ಲಿ ಕರೆದ ಸುದ್ದಿಗೋಷ್ಠಿ ಸಂದರ್ಭ ಎಚ್ಚರಿಕೆ ನೀಡಿದ್ದಾರೆ.
ಮೇ.24ರಂದು ನಿಗದಿಯಾಗಿರುವ ಮದುವೆಗಳಿಗೆ ಪೂರ್ವಾನುಮತಿ ಹಿನ್ನೆಲೆಯಲ್ಲಿ ಅವಕಾಶ ನೀಡಲಾಗಿದ್ದು, ಐವತ್ತಕಿಂತ ಹೆಚ್ಚು ಜನ ಸೇರಕೂಡದು ಎಂದು ಎಚ್ಚರಿಕೆ ನೀಡಿದ್ದಾರೆ.
ಬಸ್, ಆಟೋ, ಅಂಗಡಿಗಳು, ಸಮೂಹ ಸಾರಿಗೆ ಇರುವುದಿಲ್ಲ.