ಕುಂದಾಪುರ: ನಿವೃತ್ತಿ ದಿನವೇ ಕುಸಿದು ಬಿದ್ದಿದ್ದ ಪೊಲೀಸ್ ಅಧಿಕಾರಿ ಮೃತ್ಯು

ಊಟ ಮಾಡುತ್ತಿದ್ದ ಸಂದರ್ಭ ಕುಸಿದು ಬಿದ್ದವರು ಬ್ರೈನ್ ಹ್ಯಾಮರೇಜ್‌ನಿಂದ ತೀವೃ ಅಸ್ವಸ್ಥರಾಗಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಬೀಳ್ಕೊಡುಗೆ ಸಮಾರಂಭದ ಸಂದರ್ಭ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಕೋಟ ಎ.ಎಸ್ಸೈ, ಬೈಂದೂರು ನಿವಾಸಿ ಆನಂದ ವೆಂಕಟ ದೇವಾಡಿಗ(60) ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ಮೃತಪಟ್ಟಿದ್ದಾರೆ.

ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ನಿವೃತ್ತರಾದ ಹಿನ್ನೆಲೆಯಲ್ಲಿ ಕೋಟ ಪೋಲೀಸ್ ಠಾಣೆಯಲ್ಲಿ ಜೂ.1ರಂದು ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಊಟ ಮಾಡುತ್ತಿದ್ದ ಸಂದರ್ಭ ಕುಸಿದು ಬಿದ್ದ ಆನಂದ ಅವರು ಬ್ರೈನ್ ಹ್ಯಾಮರೇಜ್‌ನಿಂದ ತೀವೃ ಅಸ್ವಸ್ಥರಾಗಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಸಾವಪ್ಪಿದ್ದಾರೆ.

ಮೂಡುಬಿದಿರೆ, ಶಂಕರನಾರಾಯಣ, ಕಾಪು, ಕೋಟ, ಗಂಗೊಳ್ಳಿ ಠಾಣೆಗಳಲ್ಲಿ  ಸೇವೆ ಸಲ್ಲಿಸಿದ್ದ ಆನಂದ್, ಸೇವಾ ಪದೋನ್ನತಿ ಹೊಂದಿ ನಿವೃತ್ತಿ ತನಕ ಕೋಟ ಠಾಣೆಯಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬ್ರಹ್ಮಾವರ ವೃತ್ತನಿರೀಕ್ಷಕ ರಾಜಶೇಖರ್ ಮತ್ತು ಪೊಲೀಸ್ ಸಿಬಂದಿ ಮಂಗಳವಾರ ಸಂಜೆ ಮೃತರಿಗೆ ಅಂತಿಮ ನಮನ ಸಲ್ಲಿಸಿದರು.

Get real time updates directly on you device, subscribe now.