ಜೂನ್.30 ತಾರಿಕೆವರೇಗ್ ಇಗರ್ಜೆಂನಿ ಮಿಸಾಂ ಆಸ್ಚಿ ನಾಂತ್: ಉಡುಪಿ ಬಿಸ್ಪ್ ಜೆರಾಲ್ಡ್ ಲೋಬೊ

ಜೂ.30ರ ವರೆಗೆ ಚರ್ಚ್‌ಗಳಲ್ಲಿ ಸಾಮೂಹಿಕ ಪೂಜೆ ಇಲ್ಲ

ಕೋವಿದ್-19 ಪಿಡೆಚೊ ವೊಸೊ ಆಮ್ಚೆಥಾವ್ನ್ ಪೆಲ್ಯಾಕ್ ಲಾಗನಾಶೆಂ ಜಾಗ್ರುತ್ಕಾಯ್ ಘೆಂವ್ಚಿ ಆಮಿ ಪೆಲ್ಯಾಕ್ ದಾಕಂವ್ಚೊ ಮಾಯಾಮೋಗ್ ಆನಿ ಹುಸ್ಕೊ ಮ್ಹಣ್ ಮುಕೆಲ್ಯಾಂನಿ ದಾಂಬುನ್ ಸಾಂಗ್ಲಾ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಉಡುಪಿ ಧರ್ಮಾಧ್ಯಕ್ಷಾಚ್ಯಾ ನಿವಾಸಾಂತ್ ಧರ್ಮಾಧ್ಯಕ್ಷಾಚ್ಯಾ ಮುಕೇಲ್ಪಣಾರ್ ಕೋವಿದ್-19 ಪಿಡೆಚ್ಯಾ ಪಾಟ್‌ಥಳಾರ್ ಮಿಸಾಂ ಆನಿ ಇಗರ್ಚೊ ಉಗ್ತ್ಯೊ ಕರ್ಚೆವಿಶಿಂ ಭಾಸಾದಾಸ್ ಚಲ್ಲಿ. ಉಡುಪಿ ಜಿಲ್ಲ್ಯಾಚಿ ಪ್ರಸ್ತುತ್ ಪರಿಗತ್ ಬೋವ್ ಸೂಕ್ಷ್ಮ್ ಜಾಲ್ಲ್ಯಾನ್, ಜೂನ್30 ತಾರಿಕೆವರೇಗ್ ಇಗರ್ಜಾಂನಿ ಮಿಸಾಂ ಆನಿ ಧಾರ್ಮಿಕ್ ಕಾರ್ಯಿಂ ಚಲಯ್ನಾಸ್ತಾಂ ರಾವುಂಕ್ ನಿರ್ಧಾರ್ ಘೆತ್ಲಾ.

ಜೂ.30 ತಾರಿಕೆಚ್ಯಾ ಆಸ್‌ಪಾಸ್, ಕೋವಿದ್-19 ಪರಿಗತಿಚೆಂ ಪುನರ್-ಪರಿಶೀಲನ್ ಕರ್ನ್ ಮುಕ್ಲೆಂ ಕ್ರಮ್ ಘೆಂವ್ಚ್ಯಾಕ್ ಸರ್ವಾನುಮತೆನ್ ನಿರ್ಧಾರ್ ಘೆತ್ಲಾ. ಹೊ ನಿರ್ಧಾರ್ ಸರ್ವಾಂನಿ ಪಾಳುಂಕ್ ಉಡುಪಿ ದಿಯೆಸೆಜಿಚೊ ಧರ್ಮಾಧ್ಯಕ್ಷ್ ಅ.ಮಾ.ದೊ ಜೆರಾಲ್ಡ್ ಲೋಬೊ ಹಾಣಿ ಉಲೊ ದಿಲಾ.

ಜೂ.9, 2020ವೆರ್ ಚಲ್‌ಲ್ಲೆ ಉಡುಪಿ ಜಿಲ್ಲ್ಯಾಚ್ಯಾ ಸರ್ವ್ ಕ್ರೀಸ್ತೀ ಪಂಗ್ಡಾಂಚ್ಯಾ ಧಾರ್ಮಿಕ್ ಮುಕೆಲ್ಯಾಂಚ್ಯೆ ಜಮಾತೆಂತ್‌ಯಿ ಹೊಚ್ಚ್ ನಿರ್ಧಾರ್ ಘೆತ್ಲಾ.

ಕೋವಿದ್-19 ಪಿಡೆಚೊ ವೊಸೊ ಆಮ್ಚೆಥಾವ್ನ್ ಪೆಲ್ಯಾಕ್ ಲಾಗನಾಶೆಂ ಜಾಗ್ರುತ್ಕಾಯ್ ಘೆಂವ್ಚಿ ಆಮಿ ಪೆಲ್ಯಾಕ್ ದಾಕಂವ್ಚೊ ಮಾಯಾಮೋಗ್ ಆನಿ ಹುಸ್ಕೊ ಮ್ಹಣ್ ಮುಕೆಲ್ಯಾಂನಿ ದಾಂಬುನ್ ಸಾಂಗ್ಲಾ.

ಜೂ.30ರ ವರೆಗೆ ಚರ್ಚ್‌ಗಳಲ್ಲಿ ಸಾಮೂಹಿಕ ಪೂಜೆ ಇಲ್ಲ: ಬಿಷಪ್  ಡಾ. ಜೆರಾಲ್ಡ್ ಲೋಬೊ

ಕೋವಿಡ್-19 ಹಿನ್ನೆಲೆಯಲ್ಲಿ ಜೂ.30ರ ವರೆಗೆ ಉಡುಪಿ ಕ್ರೈಸ್ತ ಧರ್ಮ ಪ್ರಾಂತ್ಯದ ಯಾವುದೇ ಚರ್ಚ್‌ಗಳಲ್ಲಿ ಸಾಮೂಹಿಕ ಪೂಜೆ ಇರುವುದಿಲ್ಲ ಎಂದು ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಲೋಬೊ ತಿಳಿಸಿದ್ದಾರೆ.

ಮಂಗಳವಾರ ಉಡುಪಿ ಕೆಥೊಲಿಕ್ ಧರ್ಮಾಧ್ಯಕ್ಷರ ನಿವಾಸದಲ್ಲಿ ನಡೆದ ಉಡುಪಿ ಧರ್ಮಪ್ರಾಂತ್ಯ, ಚರ್ಚ್ ಆಫ್ ಸೌತ್ ಇಂಡಿಯಾ(ಸಿ.ಎಸ್.ಐ), ಯುನೈಟೆಡ್ ಬಾಸೆಲ್ ಮಿಷನ್ ಚರ್ಚಸ್(ಯುಬಿಎಂ), ಫುಲ್ ಗೊಸ್ವೆಲ್ ಪಾಸ್ಟರ್ಸ್ ಅಸೋಸಿಯೇಷನ್ ಮುಂತಾದ ಕ್ರೈಸ್ತ ಮುಖಂಡರ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ.

ಸರಕಾರದ ಕೋವಿಡ್ ತಡೆಯುವ ನಿಟ್ಟಿನಲ್ಲಿರುವ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿ ಮುಂಜಾಗರೂಕತೆ ವಹಿಸುವ ಭಕ್ತರಿಗೆ ವ್ಯಕ್ತಿಗತ ಭೇಟಿ ಮತ್ತು ಪ್ರಾರ್ಥನೆಗೆ ಚರ್ಚ್‌ಗಳು ತೆರೆದಿರುತ್ತವೆ ಎಂದು ಉಡುಪಿ ಯುನೈಟೆಡ್ ಕ್ರಿಶ್ಚನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ತಿಳಿಸಿದೆ.

ಕೊರೋನ ಸೋಂಕು ಇನ್ನೊಬ್ಬರಿಗೆ ಹರಡದಂತೆ ವಹಿಸುವ ಎಚ್ಚರಿಕೆಯು ನಾವು ಒನ್ನೊಬ್ಬರಿಗೆ ತೋರಿಸುವ ಪ್ರೀತಿಯ ಸಂಕೇತ ಎಂದು ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.