ಉಡುಪಿ ಟೈಲರ್ ಆತ್ಮಹತ್ಯೆ: ಪತ್ನಿ, ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಿಗೆ ಸರಕಾರಕ್ಕೆ ಕಾಂಗ್ರೆಸ್ ಒತ್ತಾಯ

ಮಲ್ಪೆಯಲ್ಲಿ ಮೀನುಗಾರಿಕೆ ತೊಡಗಿಸಿಕೊಂಡ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೂ ಸರಕಾರ ತಕ್ಷಣ ನೆರವಾಗಬೇಕೆಂದು ಒತ್ತಾಯಿಸಿದೆ.

ಕೋವಿಡ್ ಸಂಕಟ: ಬಡ ಕಾರ್ಮಿಕರಿಗೆ ಹತ್ತು ಸಾವಿರ ತುರ್ತು ನೆರವು ನೀಡಿ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಉಡುಪಿಯಲ್ಲಿ ಮನೆ ಬಾಡಿಗೆ ಹಾಗೂ ಜೀವನದ ದೈನಂದಿನ ಖರ್ಚು ವೆಚ್ಚವನ್ನು ನಿಭಾಯಿಸಲಾಗದೆ ಕನ್ನರ್ಪಾಡಿಯ ಟೈಲರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಪತ್ನಿಗೆ ಆರ್ಥಿಕ ನೆರವು ಮತ್ತು ಅವರ ಇಬ್ಬರ ಅವಳಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು  ಸರಕಾರ ತಕ್ಷಣ ನೀಡಬೇಕೆಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸರಕಾರವನ್ನು ಒತ್ತಾಯಿಸಿದೆ.

ಮಲ್ಪೆಯಲ್ಲಿ ಮೀನುಗಾರಿಕೆ ತೊಡಗಿಸಿಕೊಂಡ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೂ ಸರಕಾರ ತಕ್ಷಣ ನೆರವಾಗಬೇಕೆಂದು ಒತ್ತಾಯಿಸಿದೆ.

ಕೋವಿಡ್ ಸಂಕಟ: ಬಡ ಕಾರ್ಮಿಕರಿಗೆ ಹತ್ತು ಸಾವಿರ ತುರ್ತು ನೆರವು ನೀಡಿ.

ಕೋವಿಡ್-19 ಲಾಕ್ಡೌನ್ ನಿಮಿತ್ತ ಜನ ಸಂಕಷ್ಟಕ್ಕೊಳಗಾಗಿದ್ದಾರೆ. ಭವಿಷ್ಯದ ಚಿಂತೆಯಿಂದ , ಆರ್ಥಿಕ ಸಂಕಷ್ಟದಿಂದ ಬಡ, ಮಧ್ಯಮ ವರ್ಗದರವರು ಆತ್ಯಹತ್ಯೆಗೆ ಶರಣಾಗುತ್ತಿದ್ದಾರೆ. ಸರಕಾರ ಈ ಸಂದರ್ಭದಲ್ಲಿ ಮೂಕ ಪ್ರೇಕ್ಷಕನಾಗಬಾರದು. ಆರ್ಥಿಕವಾಗಿ ಹಿಂದುಳಿದ ಟೈಲರ್ ವೃತ್ತಿ, ಸಮುದ್ರದಲ್ಲಿ ಮೀನುಗಾರಿಕೆ ಮಾಡುವವರಿಗೆ, ದಿನಗೂಲಿ ಕಾರ್ಮಿಕರಿಗೆ ಕನಿಷ್ಟ 10,000 ರೂಪಾಯಿಯನ್ನು ರಾಜ್ಯ ಸರಕಾರ ಅವರ ಖಾತೆಗೆ ಜಮಾ ಮಾಡುವ ಮೂಲಕ ಕಂಗಾಲಾದ ಜನರಿಗೆ ಜೀವನ ಮುಂದುವರಿಸಲು ನೈತಿಕ ಸ್ಥೈರ್ಯವನ್ನು ನೀಡುವುದು ಈ ಸಂದರ್ಭದಲ್ಲಿ ಪ್ರಾಮಾಣಿಕ  ಪ್ರಯತ್ನವಾಗುತ್ತದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಇದಿನ್ನೂ ಪ್ರಾರಂಭ. ಇನ್ನಷ್ಟು ಜನ ಲಾಕ್ಡೌನ್ ಮುಕ್ತವಾದರೂ ವ್ಯಾಪಾರ ವಹಿವಾಟುಗಳು ಸಹಜ ಸ್ಥಿತಿಗೆ ಬರದೆ ಜಿಗುಪ್ಸೆಗೊಂಡು ದಿಕ್ಕು ಕಾಣದೆ ಆತ್ಮಹತ್ಯೆಗೆ ಶರಣಾಗುವಂಥ ಪರಿಸ್ಥಿತಿ ಇದೆ. ಈಗಾಗಲೇ ಇಂಥ ಘಟನೆಗಳು ಪ್ರತೀನಿತ್ಯ ವರದಿಯಾಗಲಾರಂಭಿಸಿವೆ.  ಕೇಂದ್ರ, ರಾಜ್ಯ ಸರಕಾರಗಳು ಜನರ ಸಂಕಷ್ಟಕ್ಕೆ ಸ್ಪಂದಿಸುವುದು ಪ್ರಜಾಪ್ರಭುತ್ವದಲ್ಲಿ ಚುನಾಯಿತ ಸರಕಾರಗಳ ಜವಾಬ್ದಾರಿ ಹಾಗೂ ಕರ್ತವ್ಯ ಕೂಡಾ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕರೆ, ನಗರಸಭಾ ಸದಸ್ಯ ರಮೇಶ್ ಕಾಂಚನ್, ಎಸ್.ಸಿ ಘಟಕ ಅಧ್ಯಕ್ಷ ಗಣೇಶ್ ನೆರ್ಗಿ, ಉಡುಪಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕರ್ ಸರಕಾರವನ್ನು ಎಚ್ಚರಿಸಿದ್ದಾರೆ,

Get real time updates directly on you device, subscribe now.