ಪಡುಕೋಣೆ: ಸೌಪರ್ಣಿಕಾ ನದಿಯಲ್ಲಿ ಶವ ಪತ್ತೆ

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಪಡುಕೋಣೆ ಸಮೀಪದ ದ್ವೀಪ ಪ್ರದೇಶ ಕುರು ಎಂಬಲ್ಲಿ ಸೌಪರ್ಣಿಕಾ ನದಿಯಲ್ಲಿ ಪುರುಷನೋರ್ವನ  ಮೃತದೇಹ ತೇಲಿ ಬಂದಿದೆ.

ಕೆ. ರಾಮಚಂದ್ರ ಹೆಬ್ಬಾರ ಇವರು ತಮ್ಮ ತೋಟದ ಬದಿಯ ನದಿ ನೀರಲ್ಲಿ ಪೊದೆಗಳ ನಡುವೆ ಕೊಳೆತ ಸ್ಥಿತಿಯಲ್ಲಿದ್ದ ಶವ ಕಂಡು ಗಂಗೊಳ್ಳಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.