ಉಡುಪಿ: ಕಂಬಕ್ಕೆ ಗುದ್ದಿದ ಟೆಂಪೊ, ಕುಂದಾಪುರದ ಇಬ್ಬರ ಮೃತ್ಯು

ಆದಿ ಉಡುಪಿಯಿಂದ ತರಕಾರಿ ಖರೀದಿಸಲು ಕುಂದಾಪುರದಿಂದ ಟೆಂಪೊದಲ್ಲಿ ಹೋಗುತ್ತಿದ್ದ ಸಂದರ್ಭ ಸೂಚನಾ ಫಲಕಕ್ಕೆ ಟೆಂಪೊ ಗುದ್ದಿತ್ತು.

ಕರಾವಳಿ ಕರ್ನಾಟಕ ವರದಿ
ಉಡುಪಿ: ತರಕಾರಿ ಸಾಗಾಟದ ಟೆಂಪೊ ರಸ್ತೆಯ ಸೂಚನಾ ಫಲಕಕ್ಕೆ ಗುದ್ದಿದ ಪರಿಣಾಮ ಇಬ್ಬರು ಸಾವಪ್ಪಿದ ಘಟನೆ ಅಂಬಾಗಿಲು ಬಳಿ ಇಂದು ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ನಡೆದಿದೆ.

ಮೃತರನ್ನು ಕುಂದಾಪುರ ತಾಲೂಕಿನ ಮೂರುಕೈ ನಿವಾಸಿ ದಿನೇಶ(37) ಮತ್ತು ಬಳ್ಕೂರು ನಿವಾಸಿ ಮಂಜುನಾಥ(21) ಎಂದು ಗುರುತಿಸಲಾಗಿದೆ. ದಿನೇಶ್ ಸ್ಥಳದಲ್ಲೇ ಸಾವಪ್ಪಿದ್ದರು ಎನ್ನಲಾಗಿದೆ. ಮಂಜು ತಲೆಗೆ ಗಂಭೀರ ಏಟು ಬಿದ್ದಿದ್ದು, ಅಜ್ಜರಕಾಡು ಆಸ್ಪತ್ರೆಗೆ ಸಾಗಿಸಲಾದರೂ ಚಿಕಿತ್ಸೆಗೆ ಸ್ಪಂದಿಸಿಲ್ಲ.

ಆದಿ ಉಡುಪಿಯಿಂದ ತರಕಾರಿ ಖರೀದಿಸಲು ಕುಂದಾಪುರದಿಂದ ಟೆಂಪೊದಲ್ಲಿ ಹೋಗುತ್ತಿದ್ದ ಸಂದರ್ಭ ಸೂಚನಾ ಫಲಕಕ್ಕೆ ಟೆಂಪೊ ಗುದ್ದಿತ್ತು.

ಉಡುಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನೇಶ್ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮಂಜುನಾಥ ಅವರು ಪದವೀಧರರಾಗಿದ್ದು, ಉತ್ತಮ ವಾಲಿಬಾಲ್ ಆಟಗಾರರಾಗಿದ್ದರು.  ಕೆಲ ಸಮಯದಿಂದ ದಿನೇಶ್ ಅವರ ಜೊತೆ ಕೆಲಸ ಮಾಡುತ್ತಿದ್ದರು.

Get real time updates directly on you device, subscribe now.