ಕುಂದಾಪುರ: ತೆಕ್ಕಟ್ಟೆ ನಿವಾಸಿ ಕೊರೋನಾ ಸೋಂಕಿನಿಂದ ಮೃತ್ಯು

ಎಷ್ಟು ಬೇಗ ಮಾಹಿತಿ ನೀಡುತ್ತಾರೋ ಅದರಿಂದ ಕೊರೋನಾ ಸೋಂಕಿತ ರೋಗಿಗಳನ್ನು ಉಳಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಮಾಹಿತಿಯನ್ನು ನಾಗರಿಕರು ಮುಚ್ಚಿಡಬಾರದು.

ಬೇಗ ಆಸ್ಪತ್ರೆಗೆ ದಾಖಲಾದಷ್ಟು ರೋಗಿಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯೂ ಜಾಸ್ತಿ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಮುಂಬೈಯಿಂದ ಉಡುಪಿ ಜಿಲ್ಲೆಯ ಕುಂದಾಪುರಕ್ಕೆ ಬಂದಿದ್ದ ವ್ಯಕ್ತಿಯೋರ್ವರು ಕೋವಿಡ್19 ಸೋಂಕಿನಿಂದ ಮೃತಪಟ್ಟ ಘಟನೆ ವರದಿಯಾಗಿದೆ. ತೆಕ್ಕಟ್ಟೆಯ ಐವತ್ನಾಲ್ಕು ವರ್ಷದ ವ್ಯಕ್ತಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.

ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದ ಈ ವ್ಯಕ್ತಿಯಲ್ಲಿ ಯಾವುದೇ ಲಕ್ಷಣಗಳಿರಲಿಲ್ಲ. ಮನೆಯಲ್ಲಿ ಸಾವಪ್ಪಿದ್ದು, ಮರಣೋತ್ತರ ಪರೀಕ್ಷೆಯಿಂದ ನಿಧನದ ಕಾರಣ ತಿಳಿಯಬೇಕಿದೆ.

ಗಂಟಲು ದ್ರವ ಪರೀಕ್ಷೆ ಪಾಸಿಟಿವ್ ಇರುವುದು ಗೊತ್ತಾಗಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.

ಎಷ್ಟು ಬೇಗ ಮಾಹಿತಿ ನೀಡುತ್ತಾರೋ ಅದರಿಂದ ಕೊರೋನಾ ಸೋಂಕಿತ ರೋಗಿಗಳನ್ನು ಉಳಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಮಾಹಿತಿಯನ್ನು ನಾಗರಿಕರು ಮುಚ್ಚಿಡಬಾರದು. ಬೇಗ ಆಸ್ಪತ್ರೆಗೆ ದಾಖಲಾದಷ್ಟು ರೋಗಿಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯೂ ಜಾಸ್ತಿ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿ ಜೂ.18, ಗುರುವಾರದಂದು ಮುಂಬೈಯಿಂದ ಇತರ ನಾಲ್ವರೊಂದಿಗೆ ಬಂದಿದ್ದರು. ಪರೀಕ್ಷೆ ಸಂದರ್ಭ ಕೊರೋನಾ ಸೋಂಕಿನ ಲಕ್ಷಣಗಳು ಇಲ್ಲದೇ ಇರುವುದರಿಂದ ಹೋಂ ಕ್ವಾರಂಟೈನ್‌ಗೆ ನಿಯಮದಂತೆ ಕಳಿಸಲಾಗಿತ್ತು.

ಈ ವ್ಯಕ್ತಿಯ ನಿಧನದೊಂದಿಗೆ ಜಿಲ್ಲೆಯಲ್ಲಿ ಕೋವಿಡ್19 ಸೋಂಕಿನಿಂದ ಮೃತರ ಸಂಖ್ಯೆ ಎರಡಕ್ಕೇರಿದೆ.

Get real time updates directly on you device, subscribe now.