ಗಂಗೊಳ್ಳಿ: ಬೀದಿ ದನ ಕಳವು ಆರೋಪಿ ಬಂಧನ

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಗಂಗೊಳ್ಳಿಯಲ್ಲಿ ಬೀದಿ ದನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಕಾಪುವಿನಲ್ಲಿ ಬಂಧಿಸಲಾಗಿದೆ. ಆರೋಪಿ ಮೊಹ್ಮದ್ ಹನೀಫ್ ಎಂಬಾತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಜೂ.10ರಂದು ಗಂಗೊಳ್ಳಿಯ ಪೆರಾಜೆ ಬಾರ್ ಬಳಿ ಬೀದಿ ಬದಿಯ ದನ ಕಳವು ಮಾಡಲಾಗಿದೆ ಎಂದು ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಆರೋಪಿ ಪತ್ತೆ ಕಾರ್ಯದಲ್ಲಿ ಗಂಗೊಳ್ಳಿ ಪಿಎಸ್ಸೈ ಭೀಮಾ ಶಂಕರ ಸಿನ್ನೂರ ಸಂಗಣ್ಣ, ಸಿಬಂದಿಗಳಾದ ಶ್ರೀಧರ, ಚಂದ್ರಶೇಖರ, ಪ್ರಿನ್ಸ್, ಸಂತೋಷ, ಆರ್‌ಡಿ ಸೆಲ್ ವಿಭಾಗದ ಶಿವಾನಂದ ಅವರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ.

Get real time updates directly on you device, subscribe now.