ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಬೇಳೂರು ಪಂಚಾಯತ್ ವ್ಯಾಪ್ತಿಯ ಕಲ್ಮಂಡಿ ಎಂಬಲ್ಲಿ ಸೈಕಲ್ಗೆ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಬಾಲಕನೋರ್ವ ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಬೇಳೂರು ಕಲ್ಮಂಡಿಯ ಗಣೇಶ್ ಮೊಗವೀರ ಎಂಬವರ ಮಗ, ನೂಜಿ ಸರಕಾರಿ ಶಾಲೆ ನಾಲ್ಕನೇ ತರಗತಿ ವಿದ್ಯಾರ್ಥಿ ಮಂಜುನಾಥ(9) ಮೃತಪಟ್ಟಿದ್ದಾನೆ.
ಬಾಲಕ ಸೈಕಲ್ನಲ್ಲಿ ಮೊಗೆಬೆಟ್ಟು ಕಲ್ಮಂಡಿ ಜಂಕ್ಷನ್ನಿಂದ ಕರಣಿ ಕಡೆ ಹೋಗುವಾಗ ಟಿಪ್ಪರ್ ಹಿಂದಿನಿಂದ ಗುದ್ದಿತ್ತು. ಗಾಯಾಳು ಬಾಲಕನನ್ನು ಕೋಟೇಶ್ವರ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಸಾವಪ್ಪಿದ್ದಾನೆ.
ಟಿಪ್ಪರ್ ಚಾಲಕ ಭೋಜ ಪೂಜಾರಿಯ ಅಜಾಗರೂಕತೆಯ ವಾಹನ ಚಾಲನೆ ವಿರುದ್ಧ ಕೋಟ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.