ಲಾಕ್ಡೌನ್ ಸಂಕಟ: ಕೋಟದಲ್ಲಿ ಯುವಕ ಆತ್ಮಹತ್ಯೆ
ಜು.18ರ ರಾತ್ರಿ ನೇಣು ಬಿಗಿದು ಆತ್ಮಹತ್ಯೆ.
ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುವ ವ್ಯವಹಾರ ಮಾಡುತ್ತಿದ್ದ ಯುವಕ.
ಕರಾವಳಿ ಕರ್ನಾಟಕ ವರದಿ
ಬ್ರಹ್ಮಾವರ: ತಾಲೂಕಿನ ಗಿಳಿಯಾರು ಗ್ರಾಮದ ರಾಜಶೇಖರ ದೇವಸ್ಥಾನ ಸಮೀಪದ ನಿವಾಸಿ ಪ್ರಭಾಕರ ಶೆಟ್ಟಿಯವರ ಪುತ್ರ ನಿತಿಶ್(31) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುವ ವ್ಯವಹಾರ ಮಾಡುತ್ತಿದ್ದ ನಿತಿಶ್ ಶೆಟ್ಟಿ ಲಾಕ್ ಡೌನ್ ಬಳಿಕ ವ್ಯವಹಾರ ಇಲ್ಲದೇ ನೊಂದಿದ್ದರು.
ಜು.18ರ ರಾತ್ರಿ ನೇಣು ಬಿಗಿದು ಆತ್ಮಹತ್ಯೆಗೊಂಡಿರುವ ಬಗ್ಗೆ ಮೃತರ ಸಹೋದರ ನೀಡಿದ ದೂರಿನಂತೆ ಕೋಟ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.