ಕರಾವಳಿ ಕರ್ನಾಟಕ ವರದಿ/ನವೀನ್ ಕೋತ್, ಆನಗಳ್ಳಿ
ಕುಂದಾಪುರ: ಬಸ್ರೂರು ಸಂತ ಫಿಲಿಫ್ ನೇರಿ ಇಗರ್ಜಿಯ ವಠಾರದಲ್ಲಿ ಕಥೋಲಿಕ್ ಸಭಾ ಬಸ್ರೂರು ಘಟಕದ ಪ್ರಾಯೋಜಕತ್ವದಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಪ್ರೀತನ್ ಡಿ ಸೋಜ, ಕುಂದಾಪುರ ವಾರಾಡೊ ಅಧ್ಯಕ್ಷರಾದ ಮೇಬಲ್ ಡಿ ಸೋಜ, ಇಗರ್ಜಿಯ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಫ್ಲೈವನ್ ಡಿ ಸೋಜ, 18 ಆಯೋಗದ ಸಂಚಾಲಕರಾದ ಅಲ್ಫ್ರೆಡ್ ಕೋತ್, ವಾರ್ಡಿನ ಗುರ್ಕಾರುಗಳು ಹಾಗೂ ಕಥೋಲಿಕ್ ಸಭೆಯ ಸದಸ್ಯರು ಹಾಜರಿದ್ದರು.
ಕಾರ್ಯದರ್ಶಿ ಮೇಲ್ವಿನ್ ಫುರ್ಟಾಡೊ ಕಾರ್ಯಕ್ರಮ ನೆರವೇರಿಸಿದರು.