ಕಾರ್ಕಳ ಶಾಸಕ ಸುನಿಲ್ ಕುಮಾರ್ ಸಿಮೆಂಟ್ ಹಗರಣ: ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಆಗ್ರಹ

ಕಾಂಗ್ರೆಸ್ ನಿಯೋಗದಲ್ಲಿ ಕಾರ್ಕಳ ಪುರಸಭಾ ಸದಸ್ಯ ಶುಭದ ರಾವ್ ಹಾಗೂ ಮಧುರಾಜ್ ಶೆಟ್ಟಿ ಇದ್ದರು.

‘Not for resale’ ಎಂದು ಮುದ್ರಿತವಾದ ಸರಕಾರಿ ಕಾಮಗಾರಿಗಳಿಗೆ ಬಳಸಲ್ಪಡುವ ಸಿಮೆಂಟ್ ಬಳಸಿ ಅಕ್ರಮ ಎಸಗಿರುವ ಬಗ್ಗೆ ಶಂಕೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಕಾರ್ಕಳ ಶಾಸಕ ಸುನಿಲ್ ಕುಮಾರ್ ಖಾಸಗಿ ಕಛೇರಿಯ ನಿರ್ಮಾಣಕ್ಕೆ ‘Not for resale’ ಎಂದು ಮುದ್ರಿತವಾದ ಸರಕಾರಿ ಕಾಮಗಾರಿಗಳಿಗೆ ಬಳಸಲ್ಪಡುವ ಸಿಮೆಂಟ್ ಬಳಸಿ ಅಕ್ರಮ ಎಸಗಿರುವ ಬಗ್ಗೆ ಶಂಕೆ ಇದ್ದು, ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಕಾಂಗ್ರೆಸ್ ಆಗ್ರಹಿಸಿದೆ.

ಈ ಬಗ್ಗೆ ವಿಡಿಯೋ ಇದ್ದು, ಇದೊಂದು ಅಕ್ರಮ ಸಿಮೆಂಟ್ ಹಗರಣ ಎನ್ನುವುದರ ಬಗ್ಗೆ ಸಂಶಯವಿದೆ ಎಂದು ಕಾಂಗ್ರೆಸ್ ತಿಳಿಸಿದೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಬೈಂದೂರು ಮಾಜಿ ಶಾಸಕರಾದ ಗೋಪಾಲ ಪೂಜಾರಿ,ಮಾಜಿ ಶಾಸಕರಾದ ಯು.ಆರ್.ಸಭಾಪತಿ ಮುಂದಾಳತ್ವ ವಹಿಸಿದ್ದರು.

ನಿಯೋಗದಲ್ಲಿ ಕೆಪಿಸಿಸಿ ಮುಖಂಡರಾದ ಮುರಳಿ ಶೆಟ್ಟಿ, ಎಂ.ಎ.ಗಫೂರ್, ವೆರೋನಿಕಾ ಕರ್ನೆಲಿಯೋ, ಜಿಲ್ಲಾ ಕಾಂಗ್ರೆಸ್ ಉಪಾದ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ನೀರೇಕೃಷ್ಣ ಶೆಟ್ಟಿ,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಕಿಣಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಶ್ವಾಸ್ ವಿ ಅಮೀನ್, ವೈ ಸುಕುಮಾರ್,ಕಾರ್ಕಳ, ಬ್ಲಾಕ್ ಅದ್ಯಕ್ಷರಾದ ಶೇಖರ ಮಡಿವಾಳ, ಲೀಗಲ್ ಸೆಲ್ ಅಧ್ಯಕ್ಷರಾದ ಹರೀಶ್ ಶೆಟ್ಟಿ ಪಾಂಗಾಳ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷರಾದ ಇಸ್ಮಾಯಿಲ್ ಅತ್ರಾಡಿ, ಹೆಬ್ರಿ ಬ್ಲಾಕ್ ಅದ್ಯಕ್ಷರಾದ ಮಂಜುನಾಥ ಪೂಜಾರಿ, ಕಾರ್ಕಳ ಪುರಸಭಾ ಸದಸ್ಯರುಗಳಾದ ಶುಭದ ರಾವ್ ಹಾಗೂ ಮಧುರಾಜ್ ಶೆಟ್ಟಿ, ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷರಾದ ಯತೀಶ್ ಕರ್ಕೇರ, ಬ್ರಹಾವರ ಬ್ಲಾಕ್ ಮಾಜಿ ಅದ್ಯಕ್ಷರಾದ ನಿತ್ಯಾನಂದ ಶೆಟ್ಟಿ,ಬಾಲಕೃಷ್ಣ ಪೂಜಾರಿ, ಎಂ ಪಿ ಮೊಯಿದಿನಬ್ಬ, ಯೋಗೀಶ್ ನಯನ್ ಇನ್ನ, ಕೃಷ್ಣ ಶೆಟ್ಟಿ ನಲ್ಲೂರ್, ಅಜಿತ್ ಹೆಗ್ಡೆ ಮಾಳಾ, ಪ್ರದೀಪ್ ಶೆಟ್ಟಿ,ಹಮದ್, ಝಮೀರ್ ಹಾಗೂ ಕಾಂಗ್ರೆಸಿನ ವಿವಿಧ ಘಟಕಗಳ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Get real time updates directly on you device, subscribe now.