ಕುಂದಾಪುರ: ಪಿಕಪ್ ಡಿಕ್ಕಿ, ಬೈಕ್ ಸವಾರರಿಗೆ ಗಾಯ

ಕರಾವಳಿ ಕರ್ನಾಟಕ ವರದಿ
ಕುಂದಾಪುರ : ತಲ್ಲೂರು ಗ್ರಾಮದ ಪಾರ್ತೀಕಟ್ಟೆಯ ಜೆಸಿಬಿ ಗ್ಯಾರೇಜ್ ಬಳಿ ತಲ್ಲೂರು-ನೇರಳಕಟ್ಟೆ ರಸ್ತೆಯಲ್ಲಿ ಪಿಕಪ್ ವಾಹನವೊಂದು ಬೈಕ್ ಹ್ಯಾಂಡಲ್‌ಗೆ ಸವರಿಕೊಂಡು ಹೋದಾಗ ರಸ್ತೆಗೆ ಬಿದ್ದ ಬೈಕ್ ಸವಾರರಿಬ್ಬರಿಗೆ ಗಾಯಗಳಾಗಿವೆ.

ಗಾಯಾಳುಗಳನ್ನು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಂತಾವರ ಐದು ಸೆಂಟ್ಸ್ ಕಾಲನಿಯ ರಂಜಿತ್(23) ಮತ್ತು ಸಹ ಸವಾರ ಧನರಾಜ್ ಎಂಬವರಿಗೆ ತರಚಿದ ಗಾಯಗಳಾಗಿವೆ.

ಬಜರಂಗದಳ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಜು.30ರ ರಾತ್ರಿ ಹತ್ತು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಪಿಕಪ್ ವಾಹನ ನಿಲ್ಲಿಸದೇ ಹೋದ ಬಗ್ಗೆ ಕುಂದಾಪುರ ಪೊಲೀಸರಿಗೆ ದೂರು ನೀಡಲಾಗಿದ್ದು, ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Get real time updates directly on you device, subscribe now.