ಕಾರ್ಕಳ: ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿ – ನೃತ್ಯ ನಿರ್ದೇಶಕಿ ವಂದನಾ ರೈ

ರಂಗದಲ್ಲಿ ತಲ್ಲೀನರಾದರೆ  ಹಸಿವು , ನಿದ್ದೆ , ಊಟದ ಪರಿವೆಯೇ ಇಲ್ಲದ ಕಲಾಪ್ರೇಮ. ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ  ಕರ್ನಾಟಕ ಯುವ ರತ್ನ  ಪ್ರಶಸ್ತಿ ಪುರಸ್ಕೃತರು.

ಕಾರ್ಕಳ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರಿಯಾಶೀಲ ಶಿಕ್ಷಕಿ. ಶಾಲೆಯ ಸಾಂಸ್ಕೃತಿಕ ನಿರ್ದೇಶಕಿಯಾಗಿ ರಾಜ್ಯ ಮಟ್ಟದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಮೆರುಗು ನೀಡಿ ಗಮನಾರ್ಹ ಸಾಧನೆ.

ರಕ್ಷಿತ್ ವಂಡ್ಸೆ/ಕರಾವಳಿ ಕರ್ನಾಟಕ ವರದಿ
ವಂದನಾ ರೈ–  ಕಾರ್ಕಳ ಬಜಗೋಳಿ  ನಲ್ಲೂರಿನ  ಹಮಣಿಬೆಟ್ಟುವಿನವರು . ಸುಂದರ ಶೆಟ್ಟಿ ಮತ್ತು ವನಜಾಕ್ಷಿ ದಂಪತಿಯ ಮಗಳು. ನಾಟಕ, ನೃತ್ಯ , ಸಂಗೀತ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳ ಸುರಿಮಳೆ.

ಮಹಿಳಾ ಪದವಿ ಕಾಲೇಜಿಗೆ ಸೇರ್ಪಡೆಯ ನಂತರ  ಕಲಾ ಚಟುವಟಿಕೆಗಳಿಗೆ  ವೇಗ –  ಕಾಲೇಜು ಅಂತರ ಕಾಲೇಜು  ಸ್ಫರ್ಧೆಗಳಲ್ಲಿ  ಗೆಲುವಿನ ಹಿರಿಮೆ. ನೃತ್ಯ , ನಾಟಕ , ಛದ್ಮವೇಶ, ಏಕಪಾತ್ರಾಭಿನಯ ,  ಹೀಗೆ ರಂಗದಲ್ಲಿ ತಲ್ಲೀನರಾದರೆ  ಹಸಿವು , ನಿದ್ದೆ , ಊಟ , ತಿಂಡಿಯ ಪರಿವೆಯೇ ಇಲ್ಲದ ಕಲಾಪ್ರೇಮ .

‘ಮಯೂರಿ ನೃತ್ಯ  ತರಭೇತಿ’ಯನ್ನು ಹುಟ್ಟು ಹಾಕಿ  ಕಾರ್ಕಳದಲ್ಲಿ  ಮತ್ತು ಬಜಗೋಳಿಯಲ್ಲಿ  ಹಲವಾರು ಮಕ್ಕಳಿಗೆ ನೃತ್ಯ  ತರಭೇತಿ ನೀಡುತ್ತಿದ್ದಾರೆ.

ಈ ಟಿವಿಯ  ಸೂಪರ್ ಶ್ರೀಮತಿ ಸ್ಪರ್ಧೆಯಲ್ಲಿ  ಪ್ರಥಮ ಸ್ಥಾನ.  ಹೀಗೆ ನಿರಂತರ  ಸಾಧನೆಯ ಹೆಮ್ಮೆ. ಪ್ರಸ್ತುತ ಕಳೆದ ಎರಡು ವರ್ಷಗಳಿಂದ  ಕಾರ್ಕಳ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರಿಯಾಶೀಲ ಶಿಕ್ಷಕಿಯಾಗಿ  ಶಾಲೆಯ ಸಾಂಸ್ಕೃತಿಕ ನಿರ್ದೇಶಕಿಯಾಗಿ ಕ್ಲಸ್ಟರ್, ತಾಲೂಕು , ಜಿಲ್ಲೆ , ರಾಜ್ಯ ಮಟ್ಟದಲ್ಲಿ ವಿದ್ಯಾರ್ಥಿ ಗಳ ಪ್ರತಿಭಾ ಪ್ರದರ್ಶನಕ್ಕೆ  ಮೆರುಗು ನೀಡಿ ಗಮನಾರ್ಹ ಸಾಧನೆಗೈದಿದ್ದಾರೆ.

ಝೀ ಕನ್ನಡದ – ಯಾರಿಗುಂಟು ಯಾರಿಗಿಲ್ಲ , ಕಸ್ತೂರಿ ಚಾನೆಲ್ – ರಾಣಿ ಮಹಾರಾಣಿ, ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಯುವ ರತ್ನ  ಪ್ರಶಸ್ತಿ ಪುರಸ್ಕೃತರು.

Differently abled ಮಕ್ಕಳ ಮನವನ್ನೂ ಕಲಾ ಚಟುವಟಿಕೆಯ ಮೂಲಕ ಗೆದ್ದಿದ್ದಾರೆ.

ವಿದ್ಯಾರ್ಥಿಗಳ ಪಾಲಿಗೆ ಅಚ್ಚುಮೆಚ್ಚಿನ ಶಿಕ್ಷಕಿ.  ಆಕೆಯೋರ್ವ ನೃತ್ಯ  ನಿರ್ದೇಶಕಿ , ಉತ್ತಮ ಸಂಘಟಕಿ ಕೂಡ. ವಂದನಾ ರೈ ಅವರ ನೃತ್ಯಗಳಲ್ಲಿ  ಜೀವಂತಿಕೆಗೆ ಪ್ರಾಮುಖ್ಯತೆ. ಅವರ ವೈರಲ್ ಆಗಿರುವ ವಿಡಿಯೋ  ಕೆಲವು ಗಂಟೆಗಳಲ್ಲಿ ಸಾವಿರಕ್ಕಿಂತ ಜಾಸ್ತಿ ಲೈಕ್ ಪಡೆದಿದೆ.

ವಂದನ ರೈ ಮಕ್ಕಳಿಗೆ ಕನ್ನಡ ವರ್ಣಮಾಲೆಯ ಅಕ್ಷರ , ಒಂದರಿಂದ ಹತ್ತರ ವರೆಗಿನ ಅಂಕೆಗಳು, ವಾರದ ದಿನಗಳು ಮತ್ತು ಇನ್ನಿತರ  ವಿಷಯಗಳ ಬಗ್ಗೆ ವಿಡಿಯೋ ಮೂಲಕ ಮಕ್ಕಳಿಗೆ ಅರ್ಥವಾಗುವಂತೆ ಮಾಡಿದ್ದಾರೆ. ಇವರ ಜೊತೆ ಸಹ ಶಿಕ್ಷಕರು , ಮುಖ್ಯಶಿಕ್ಷಕರು ಸಹ ಭಾಗವಹಿಸುತ್ತಾರೆ.

ಮಗು ಇಷ್ಟ ಪಟ್ಟು ಕಲಿಯುವಂತಹ  ಹಾಡು , ನೃತ್ಯದ ಜೊತೆ ಅಕ್ಷರ ಅಭ್ಯಾಸ ಕಲಿಸಿದಾಗ  ಮಗು ಅತ್ಯಂತ  ಉತ್ಸಾಹದಿಂದ  ಬಹುಬೇಗನೆ ಪಾಠದ ವಿಷಯವನ್ನು ಅರ್ಥಮಾಡಿಕೊಳ್ಳುತ್ತದೆ ಎಂಬುದನ್ನು ಅವರು ಕಂಡುಕೊಂಡಿದ್ದಾರೆ. ಪಾಠವನ್ನು ಮನೋರಂಜನೆಯ ಮೂಲಕ ಮಕ್ಕಳಿಗೆ ಅರ್ಥವಾಗುವಂತೆ ತಿಳಿಸಿ ಮಾದರಿಯಾಗಿದ್ದಾರೆ.

 

 

 

 

Get real time updates directly on you device, subscribe now.