ತೆಕ್ಕಟ್ಟೆ ಲಯನ್ಸ್ ಕ್ಲಬ್:  ಮದರ್ ತೆರೆಸಾ ಜನ್ಮ ದಿನಾಚರಣೆ

‘ಸೈಂಟ್ ಅಂತೋನಿ ಸೀನಿಯರ್ ಸಿಟಿಜನ್ ಸಂಸ್ಥೆ’ ಕೋಟೇಶ್ವರದಲ್ಲಿ ಆಚರಿಸಲಾಯಿತು.

ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶಂಕರ ಶೆಟ್ಟಿ ಹಿರಿಯ ನಾಗರಿಕರನ್ನು ಗೌರವಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಮದರ್ ತೆರೆಸಾ ಜನ್ಮ ದಿನಾಚರಣೆಯನ್ನು ‘ಸೈಂಟ್ ಅಂತೋನಿ ಸೀನಿಯರ್ ಸಿಟಿಜನ್ ಸಂಸ್ಥೆ’ ಕೋಟೇಶ್ವರದಲ್ಲಿ ತೆಕ್ಕಟ್ಟೆ ಲಯನ್ಸ್ ಕ್ಲಬ್ ವತಿಯಿಂದ ಆಚರಿಸಲಾಯಿತು.

ಸಂಸ್ಥೆಯ ಹಿರಿಯ ನಾಗರಿಕರಿಗೆ ಹಣ್ಣು-ಹಂಪಲುಗಳನ್ನು ನೀಡಿ ಗೌರವಿಸಲಾಯಿತು. ತೆಕ್ಕಟ್ಟೆ ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷರು ಹಾಗೂ ವಲಯ ಅಧ್ಯಕ್ಷರು ಆಗಿರುವ ಕೆ. ಸೀತಾರಾಮ ಶೆಟ್ಟಿ ಮದರ್ ತೆರೆಸಾರವರ ಸೇವಾ ಮನೋಭಾವದ ಕುರಿತು ಮಾತನಾಡಿದರು.

ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶಂಕರ ಶೆಟ್ಟಿ ಹಿರಿಯ ನಾಗರಿಕರನ್ನು ಗೌರವಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಖಜಾಂಜಿ ಸದಾನಂದ ಶೆಟ್ಟಿ ಹಾಗೂ ಕ್ಲಬಿನ ಸರ್ವಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.

ಸಂಸ್ಥೆಯ ಮುಖ್ಯಸ್ಥರು ಸರ್ವರನ್ನು ಸ್ವಾಗತಿಸಿದರು. ಕ್ಲಬ್ ಕಾರ್ಯದರ್‍ಶಿ ಬಿ. ಮಹೇಶ್ಚಂದ್ರ ಶೆಟ್ಟಿ ವಂದಿಸಿದರು. ಟಿ. ಸೀತಾರಾಮ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

 

 

 

 

Get real time updates directly on you device, subscribe now.