ತೆಕ್ಕಟ್ಟೆ ಲಯನ್ಸ್ ಕ್ಲಬ್‌ನಿಂದ ಇಂಜಿನಿಯರ್ ಚೇತನ್ ಹೆಗ್ಡೆಗೆ ಸನ್ಮಾನ

ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ಕೆ. ಸೀತಾರಾಮ್ ಶೆಟ್ಟಿ ಇಂಜಿನಿಯರ್ ದಿನಾಚರಣೆಯ ಕುರಿತು ಮಾತನಾಡಿದರು.

ಕ್ಲಬ್ ಅಧ್ಯಕ್ಷರಾದ ಶಂಕರ್ ಶೆಟ್ಟಿ ಚೇತನ್ ಹೆಗ್ಡೆಯವರ ಕುರಿತು ಮಾತನಾಡಿದರು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಲಯನ್ಸ್ ಕ್ಲಬ್ ವತಿಯಿಂದ ಇಂಜಿನಿಯರ್ ದಿನಾಚರಣೆಯ ಪ್ರಯುಕ್ತ ಹೆಸರಾಂತ ಇಂಜಿನಿಯರ್ ಚೇತನ್ ಹೆಗ್ಡೆ ಅವರನ್ನು ಸನ್ಮಾನಿಸುವುದರೊಂದಿಗೆ ಆಚರಿಸಲಾಯಿತು.

ಕ್ಲಬ್ ಖಜಾಂಜಿ ಸದಾನಂದ ಶೆಟ್ಟಿ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷರಾದ ಕೆ. ಸೀತಾರಾಮ್ ಶೆಟ್ಟಿ ಇಂಜಿನಿಯರ್ ದಿನಾಚರಣೆಯ ಕುರಿತು ಮಾತನಾಡಿದರು.

ಕ್ಲಬ್ ಅಧ್ಯಕ್ಷರಾದ ಶಂಕರ್ ಶೆಟ್ಟಿಯವರು ಚೇತನ್ ಹೆಗ್ಡೆಯವರ ಕುರಿತು ಮಾತನಾಡಿದರು.

ಕಾರ್ಯದರ್ಶಿ ಬಿ. ಮಹೇಶ್ಚಂದ್ರ ಶೆಟ್ಟಿ ವಂದಿಸಿದರು. ಜಯಕರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

 

 

 

 

Get real time updates directly on you device, subscribe now.