ಕುಂದಾಪುರ: ಎಡ್ವರ್ಡ್ ಮೆಮೋರಿಯಲ್ ಕ್ಲಬ್‌ನಲ್ಲಿ ಕೆ.ಡಿ.ಎಫ್(KDF) ಕರಾಟೆ ಎಂಡ್ ಫಿಟ್ನೆಸ್ ಅಕಾಡೆಮಿ ‍

'ಗಾಂಧಿ ಸ್ಮಾರಕ ಮಂದಿರ'ದಲ್ಲಿ ಕಿರಣ್ಸ್ ಡ್ರ್ಯಾಗನ್ ಫಿಸ್ಟ್ ಮಾರ್ಷಲ್ ಆರ್ಟ್ಸ್ ಆಫ್ ಇಂಡಿಯಾ (ರಿ.) ಇದರ ಇನ್ನೊಂದು ಕರಾಟೆ ಸ್ಕೂಲ್ ಉದ್ಘಾಟನೆ.

ಮಂಜುನಾಥ ಆಸ್ಪತ್ರೆಯ ಫೌಂಡರ್ ಹಾಗೂ ಎಡ್ವರ್ಡ್ ಕ್ಲಬ್ ಕಾರ್ಯದರ್ಶಿ ಡಾ| ಎಮ್.ವಿ. ಕುಲಾಲ್ ನೆರವೇರಿಸಿದರು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ನಗರದ ಎಡ್ವರ್ಡ್ ಮೆಮೋರಿಯಲ್ ಕ್ಲಬ್ (ಗಾಂಧಿ ಸ್ಮಾರಕ ಮಂದಿರ)ದಲ್ಲಿ ಕಿರಣ್ಸ್ ಡ್ರ್ಯಾಗನ್ ಫಿಸ್ಟ್ ಮಾರ್ಷಲ್ ಆರ್ಟ್ಸ್ ಆಫ್ ಇಂಡಿಯಾ (ರಿ.) ಇದರ ಇನ್ನೊಂದು ಕರಾಟೆ ಸ್ಕೂಲ್ ಉದ್ಘಾಟನೆಯನ್ನು ಮಂಜುನಾಥ ಆಸ್ಪತ್ರೆಯ ಫೌಂಡರ್ ಹಾಗೂ ಎಡ್ವರ್ಡ್ ಕ್ಲಬ್ ಕಾರ್ಯದರ್ಶಿ ಡಾ| ಎಮ್.ವಿ. ಕುಲಾಲ್ ನೆರವೇರಿಸಿದರು.

ಮುಖ್ಯ ಅತಿಥಿಯಾಗಿ Distphy Education ಆಫೀಸರ್ ಮಧುಕರ್ ಎಸ್. ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು, ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಶರವಿ ಸಾಲ್ಯಾನ್ ಉಪಸ್ಥಿತರಿದ್ದು, ಅತ್ಯಂತ ಆಧುನಿಕ ಉಪಕರಣಗಳಿರುವ ಈ ಕರಾಟೆ ಶಾಲೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಸಂಸ್ಥೆಗೆ ಶುಭ ಹಾರೈಸಿದರು.

ರಾಜೀವ್ ಕೊಟ್ಯಾನ್ ಹಾಗೂ ಅರುಣ್ ಕುಮಾರ್ ಶೆಟ್ಟಿ ಬಸ್ರೂರು ಶುಭಾಶಂಸನೆ ಗೈದರು.

ಸಂಸ್ಥೆಯ ಮುಖ್ಯ ಶಿಕ್ಷಕ ಹಾಗೂ ಹಿರಿಯ ಕರಾಟೆ ಶಿಕ್ಷಕ ಕಿರಣ್ ಕುಂದಾಪುರ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳ ಪರಿಚಯ ಮಾಡಿದರು. ಕುಮಾರಿ ರಜತ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಕರಾಟೆ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು, ಶಿಕ್ಷಕ ಸಂದೀಪ್ ವಿ.ಕೆ. ವಂದನಾರ್ಪಣೆಗೈದರು.

 

 

 

 

 

Get real time updates directly on you device, subscribe now.