‘ಕೃಷ್ಣಾನುಗ್ರಹ ಅರ್ಹಸಂಸ್ಥೆ ಮತ್ತು ದತ್ತು ಸ್ವೀಕಾರ ಕೇಂದ್ರ’ದ ಮಕ್ಕಳಿಗೆ ಉಚಿತ ಮಣಿಪಾಲ್ ಆರೋಗ್ಯ ಕಾರ್ಡ್

ಸಮಾಜದಲ್ಲಿರುವ ಅಸಹಾಯಕರನ್ನು ಗುರುತಿಸಿ ಅವರ ರಕ್ಷಣೆ ಮಾಡುವುದು ಪುಣ್ಯದ ಕೆಲಸ. 

ರಕ್ಷಿತ್ ಕುಮಾರ ವಂಡ್ಸೆ ಪ್ರಸ್ತುತ ಆರ್.ಕೆ. ಗ್ರಾಫಿಕ್ಸ್ ವಂಡ್ಸೆಯಲ್ಲಿ  ವ್ಯವಹಾರ ಮಾಡುತ್ತಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಮಣಿಪಾಲ ಆರೋಗ್ಯ ಕಾರ್ಡ್ ಪ್ರತಿನಿಧಿ ರಕ್ಷಿತ ಕುಮಾರ ವಂಡ್ಸೆ ಸಂತೆಕಟ್ಟೆಯಲ್ಲಿರುವ ‘ಕೃಷ್ಣಾನುಗ್ರಹ ಅರ್ಹಸಂಸ್ಥೆ ಮತ್ತು ದತ್ತು ಸ್ವೀಕಾರ ಕೇಂದ್ರ’ದ  ಪ್ರತಿಯೊಂದು ಮಕ್ಕಳಿಗೆ  ಉಚಿತ ಮಣಿಪಾಲ ಆರೋಗ್ಯ ಕಾರ್ಡ್‌ಗಳನ್ನು ವಿತರಣೆ ಮಾಡಿದರು.

ಸಮಾಜದಲ್ಲಿರುವ ಅಸಹಾಯಕರನ್ನು ಗುರುತಿಸಿ ಅವರ ರಕ್ಷಣೆ ಮಾಡುವುದು ಪುಣ್ಯದ ಕೆಲಸ ಎಂದು ಅವರು ಈ ಸಂದರ್ಭ ಹೇಳಿದರು. ಪ್ರತಿಯೊಬ್ಬರು ಇದೇ ರೀತಿಯಲ್ಲಿ  ಸಹಾಯ ಮಾಡಿದರೆ ಇಂತಹ ಸಂಸ್ಥೆಗೆ ತುಂಬಾ ಸಹಾಯವಾಗುತ್ತದೆ. ಈ ಸಂಸ್ಥೆಗಳ ಸೇವಾ ಮನೋಭಾವ ನೋಡಿ ನನಗೆ ತುಂಬಾ ಸಂತೋಷವಾಗಿದೆ ಎಂದರು.

ಈ ಸಂಧರ್ಭದಲ್ಲಿ  ಸಂಸ್ಥೆಯ ಪ್ರೊಜೆಕ್ಟ್ ಕೋಆರ್ಡಿನೇಟರ್  ಮೆರಿನಾ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಉಡುಪಿ ‘ಸ್ವಚ್ಚ ಭಾರತ ಫ್ರೆಂಡ್ಸ್’ ಸದಸ್ಯ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಹಳೆ ವಿದ್ಯಾರ್ಥಿಯಾಗಿರುವ ರಕ್ಷಿತ್ ಕುಮಾರ ವಂಡ್ಸೆ ಪ್ರಸ್ತುತ ಆರ್.ಕೆ. ಗ್ರಾಫಿಕ್ಸ್ ವಂಡ್ಸೆಯಲ್ಲಿ  ವ್ಯವಹಾರ ಮಾಡುತ್ತಿದ್ದಾರೆ.

ಮಣಿಪಾಲ ಆರೋಗ್ಯ ಮಾಡಲಿಚ್ಚಿಸುವವರು ಮೊಬೈಲ್ ಸಂಖ್ಯೆ 9743366746 ಯನ್ನು ಸಂಪರ್ಕಿಸಬಹುದಾಗಿದೆ.

Get real time updates directly on you device, subscribe now.