ಗಾಂಧೀಜಿಯ ಅಹಿಂಸೆ, ಶಾಸ್ತ್ರೀಜಿಯ ದೂರದರ್ಶಿತ್ವ ದೇಶಕ್ಕೆ ಸ್ಪೂರ್ತಿ ತುಂಬಿತು: ಅಶೋಕ್ ಕುಮಾರ್ ಕೊಡವೂರು

ಕೇವಲ ರಾಷ್ಟ್ರಗೀತೆಗೆ ಎದ್ದು ನಿಲ್ಲುವುದರಿಂದ ಈ ದೇಶ ಬದಲಾಗಲ್ಲ, ಅನ್ಯಾಯದ ವಿರುದ್ಧ ಎದ್ದು ನಿಂತರೆ ಮಾತ್ರ ಬದಲಾವಣೆ ಕಾಣಲು ಸಾಧ್ಯ ಎಂದು ಚಿಂತಕ ಉದ್ಯಾವರ ನಾಗೇಶ್ ಕುಮಾರ್ ನುಡಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕೆಪಿಸಿಸಿ ಪ್ಯಾನಲಿಸ್ಟ್ ಸುಧೀರ್ ಕುಮಾರ್ ಮರೋಳಿ, ಚಿಂತಕ ಫಾದರ್ ವಿಲಿಯಂ ಮಾರ್ಟಿಸ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕರಾವಳಿ ಕರ್ನಾಟಕ ವರದಿ
ಉಡುಪಿ: ಅಹಿಂಸಾ ತತ್ವದ ಮೂಲಕವೇ ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಗಾಂಧೀಜಿ ಯಶಸ್ವಿ ಕಂಡಿದ್ದರೆ ಶಾಸ್ತ್ರೀಜಿಯವರ ಶಿಸ್ತು, ಬದ್ದತೆ, ದೂರದರ್ಶಿತ್ವ, ರೈತರ ಮತ್ತು ಯೋಧರ ಬಗ್ಗೆ ಅವರ ಕಾಳಜಿ ಜನರನ್ನು ಸ್ಪೂರ್ತಿ ತುಂಬುವಲ್ಲಿ ಯಶಸ್ವಿಯಾಯಿತು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹೇಳಿದರು.

ಉಡುಪಿ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್, ಉಡುಪಿ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿಗಳು ಜಂಟಿಯಾಗಿ ಹಮ್ಮಿಕೊಂಡ ಗಾಂಧೀಜಿಯವರ 151ನೇ ಜನ್ಮದಿನೋತ್ಸವ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ 116ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

ಉದ್ಯಾವರ ನಾಗೇಶ್ ಕುಮಾರ್

ಚಿಂತಕ ಉದ್ಯಾವರ ನಾಗೇಶ್ ಕುಮಾರ್ ಮಾತನಾಡುತ್ತಾ ಗಾಂಧೀಜಿಯವರು ಸ್ವಚ್ಚತೆಯ ಕುರಿತು ನೀಡಿದ ಸಂದೇಶದ ಅನುಷ್ಠಾನವು ಇಂದು ಒಂದು ದಿನದ ಪರಿಸರವನ್ನು ಸ್ವಚ್ಚಗೊಳಿಸುವುದಕ್ಕೆ ಸೀಮಿತವಾಗಿ ಪರಿಸರ ಸ್ವಚ್ಚದಿಂದ ಮನಸ್ಸೂ ಸ್ವಚ್ಚಗೊಳ್ಳುವ ಗಾಂಧೀಜಿಯವರ ಸಂದೇಶ ವಿಫಲವಾಗಿದೆ. ಕೇವಲ ರಾಷ್ಟ್ರಗೀತೆಗೆ ಎದ್ದು ನಿಲ್ಲುವುದರಿಂದ ಈ ದೇಶ ಬದಲಾಗಲ್ಲ, ಅನ್ಯಾಯದ ವಿರುದ್ಧ ಎದ್ದು ನಿಂತರೆ ಮಾತ್ರ ಬದಲಾವಣೆ ಕಾಣಲು ಸಾಧ್ಯ ಎಂದರು.

ಜ್ಯೋತಿ ಹೆಬ್ಬಾರ್ ಸ್ವಾಗತಿಸಿ, ಜನಾರ್ಧನ ಭಂಡಾರ್ಕರ್ ಧನ್ಯವಾದವಿತ್ತರು. ವಕ್ತಾರ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು.

ಸಮಾರಂಭದಲ್ಲಿ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಕೆಪಿಸಿಸಿ ಪ್ಯಾನಲಿಸ್ಟ್ ಸುಧೀರ್ ಕುಮಾರ್ ಮರೋಳಿ, ಫಾದರ್ ವಿಲಿಯಂ ಮಾರ್ಟಿಸ್, ಮುಖಂಡರಾದ ಬಿ. ನರಸಿಂಹ ಮೂರ್ತಿ, ಮೈರ್ಮಾಡಿ ಸುಧಾಕರ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಶಬ್ಬೀರ್ ಅಹ್ಮದ್, ಹರೀಶ್ ಕಿಣಿ, ಹರೀಶ್ ಶೆಟ್ಟಿ ಪಾಂಗಾಳ, ಶಶಿಧರ ಶೆಟ್ಟಿ ಎಲ್ಲೂರು, ಕೇಶವ ಕೋಟ್ಯಾನ್, ಇಸ್ಮಾಯಿಲ್ ಆತ್ರಾಡಿ, ಹಬೀಬ್ ಅಲಿ, ಯತೀಶ್ ಕರ್ಕೇರಾ, ಲೂಯಿಸ್ ಲೋಬೊ, ವೆರೋನಿಕಾ ಕರ್ನೇಲಿಯೊ, ಗೀತಾ ವಾಗ್ಳೆ, ಚಂದ್ರಿಕಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ರೋಶನಿ ಒಲಿವರ್, ಡಾ. ಸುನೀತಾ ಶೆಟ್ಟಿ, ಕುಶಲ್ ಶೆಟ್ಟಿ, ಕೀರ್ತಿ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಪ್ರಶಾಂತ್ ಜತ್ತನ್ನ, ಕೃಷ್ಣಮೂರ್ತಿ ಆಚಾರ್ಯ, ಸುಕುಮಾರ್ ಪಡುಬಿದ್ರಿ, ವಿಜಯ ಪೂಜಾರಿ, ಮಹಾಬಲ ಕುಂದರ್, ಉಪೇಂದ್ರ ಮೆಂಡನ್, ಸುನಿಲ್ ಬಂಗೇರಾ, ಕಿಶೋರ್ ಎರ್ಮಾಳ್, ಉಪೇಂದ್ರ ಗಾಣಿಗ, ರಮೇಶ ಕಾಂಚನ್, ಪ್ರಭಾಕರ ಆಚಾರಿ, ಸೌರಭ್ ಬಲ್ಲಾಳ್, ಉಪಸ್ಥಿತರಿದ್ದರು.

Get real time updates directly on you device, subscribe now.