ಉಡುಪಿ: ಡಿಕೆಶಿ ಬಂಧನಕ್ಕೆ ಜಿಲ್ಲಾ ಕಾಂಗ್ರೆಸ್ ಖಂಡನೆ

ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದ್ದು ಕೇಂದ್ರ ಸರಕಾರ ಸಿಬಿಐ ಸಂಸ್ಥೆಯನ್ನುದುರುಪಯೋಗ ಪಡಿಸಿಕೊಂಡಿರುವುದು ಇದರಿಂದ ಸಾಬೀತಾಗಿದೆ.

ಅ.6ರ ಬೆಳಿಗ್ಗೆ 10.30ಕ್ಕೆ ಉಡುಪಿಯಲ್ಲಿ ತೀವ್ರ ಪ್ರತಿಭಟನೆಗೆ ನಿರ್ಧಾರ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಜಿಲ್ಲಾ ಕಾಂಗ್ರೆಸ್ ಸಮಿತಿಯು ಕಾಂಗ್ರೆಸ್ ಭವನದಲ್ಲಿ ತುರ್ತು ಸಭೆ ನಡೆಸಿ ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಮನೆಯ ಮೇಲೆ ನಡೆದ ಸಿಬಿಐ ದಾಳಿಯನ್ನು ತೀವ್ರವಾಗಿ ಖಂಡಿಸಿತು. ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದ್ದು ಕೇಂದ್ರ ಸರಕಾರ ಸಿಬಿಐ ಸಂಸ್ಥೆಯನ್ನುದುರುಪಯೋಗ ಪಡಿಸಿಕೊಂಡಿರುವುದು ಇದರಿಂದ ಸಾಬೀತಾಗಿದೆ.

ಈ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ವಿದ್ಯಾರ್ಥಿ ಘಟಕ ಸಂಘಟನೆಗಳೊಂದಿಗೆ ಅ.6ರ ಬೆಳಿಗ್ಗೆ 10.30ಕ್ಕೆ ಉಡುಪಿಯಲ್ಲಿ ತೀವ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದೆಂದು ನಿರ್ಧರಿಸಲಾಯಿತು.

ಸಭೆಯಲ್ಲಿ ಪಕ್ಷದ ಮುಖಂಡರಾದ ಕುಶಲ್ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಭಾಸ್ಕರ ರಾವ್ ಕಿದಿಯೂರು, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕೀರ್ತಿ ಶೆಟ್ಟಿ, ಬಿ.ನರಸಿಂಹ ಮೂರ್ತಿ, ಜನಾರ್ದನ ಭಂಡಾರ್ಕರ್, ರಮೇಶ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ, ಯತೀಶ್ ಕರ್ಕೇರಾ, ರೋಶನಿ ಒಲಿವರ್, ಹಮದ್, ಉಪೇಂದ್ರ ಮೆಂಡನ್, ದನುಷ್ ಶೆಟ್ಟಿ, ಅಬ್ದುಲ್ ರಹಮಾನ್ ಮೊದಲಾದವರು ಉಪಸ್ಥಿತರಿದ್ದರು.

Get real time updates directly on you device, subscribe now.