ಕೋಟೇಶ್ವರ: ಅಕ್ರಮ ಮದ್ಯ ಮಾರಾಟ, ಡ್ರಗ್ಸ್ ದಂಧೆಯ ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ರ್ (ರಿ.) ಕುಂದಾಪುರ ತಾಲೂಕು, ಕೋಟೇಶ್ವರ ವಲಯ ಜನಜಾಗೃತಿ ವೇದಿಕೆ ಕೋಟೇಶ್ವರ ವಲಯದ ಪದಾಧಿಕಾರಿಗಳು ನಿಯೋಗದ ನೇತೃತ್ವ ವಹಿಸಿದ್ದರು.

ಕೋಟೇಶ್ವರ ಗ್ರಾಮ ಪಂಚಾಯತ್‌ಗೆ ಮನವಿ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಅಕ್ರಮ ಮದ್ಯ ಮಾರಾಟ ಮತ್ತು ಡ್ರಗ್ಸ್ ದಂಧೆ ಪ್ರಕರಣಗಳ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಕೋಟೇಶ್ವರ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ರ್ (ರಿ.) ಕುಂದಾಪುರ ತಾಲೂಕು, ಕೋಟೇಶ್ವರ ವಲಯ ಜನಜಾಗೃತಿ ವೇದಿಕೆ ಕೋಟೇಶ್ವರ ವಲಯದ ಪದಾಧಿಕಾರಿಗಳು ನಿಯೋಗದ ನೇತೃತ್ವ ವಹಿಸಿದ್ದರು.

ಅಧ್ಯಕ್ಷರಾದ ಶ್ರೀನಿವಾಸ ಗಾಣಿಗ ಜನಜಾಗೃತಿ ವೇದಿಕೆ ಸದಸ್ಯರಾದ ಸುಬ್ರಹ್ಮಣ್ಯ ಶೆಟ್ಟಿ, ವಿಶ್ವನಾಥ ಆಚಾರ್ ಮತ್ತು ಒಕ್ಕೂಟದ ಅಧ್ಯಕ್ಷರಾದ ಶಾರದಾ, ಆಶಾ, ಕಾರ್ಯಕರ್ತೆ ಗೀತಾ, ಸಂಘದ ಸದಸ್ಯರಾದ ರುಕ್ಮೀಣಿ, ಯಶೋಧ, ಪಾರ್ವತಿ ಮತ್ತು ಮೇಲ್ವಿಚಾರಕರಾದ ನಾಗರಾಜ ಅವರು ಮನವಿ ಸಲ್ಲಿಸಿದರು.

 

Get real time updates directly on you device, subscribe now.