ಡಿ.ಕೆ.ಶಿ. ಮನೆ ಮೇಲಿನ ಸಿಬಿಐ ದಾಳಿಗೆ ಅಶೋಕ್ ಕುಮಾರ್ ಕೊಡವೂರು ಖಂಡನೆ

ಸಿಬಿಐ ದಾಳಿಯು ರಾಜಕೀಯ ಪ್ರೇರಿತ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಎದುರಿಸಲಾಗದ ಬಿಜೆಪಿ ಕಾಂಗ್ರೆಸ್ ಪಕ್ಷದ ನಾಯಕರನ್ನು ಹಣಿಯಲು ಸಿಬಿಐಯನ್ನು ಬಳಸುತ್ತಿದೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ಮನೆಯ ಮೇಲಿನ ಸಿಬಿಐ ದಾಳಿಯು ರಾಜಕೀಯ ಪ್ರೇರಿತ. ಮುಂಬರುವ ಶಿರಾ ಹಾಗೂ ಆರ್.ಆರ್. ನಗರ ಉಪಚುನಾವಣೆಯ ಸಂದರ್ಭದಲ್ಲಿಯೇ ಈ ದಾಳಿ ನಡೆದಿರುವುದು ಅದರ ಹಿಂದಿನ ಉದ್ದೇಶ ತೋರಿಸುತ್ತದೆ.ಎಂದು ಸಿಬಿಐ ದಾಳಿಯನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಖಂಡಿಸಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಎದುರಿಸಲಾಗದ ಬಿಜೆಪಿ ಕಾಂಗ್ರೆಸ್ ಪಕ್ಷದ ನಾಯಕರನ್ನು ಹಣಿಯಲು ಸಿಬಿಐಯನ್ನು ಬಳಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.