ಕುಂದಾಪುರ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಯಕ್ಷಗುರು ಕೋಟ ಶ್ರೀಧರ ಹಂದೆ ಸನ್ಮಾನ

'ಬಸವರಾಜ್ ಶೆಟ್ಟಿಗಾರ್ ಮಾಡದ ಸಾಧನೆ ಇಲ್ಲ ಎಂದು ಹೇಳಿದರೂ ಅತಿಶಯೋಕ್ತಿ ಆಗಲಾರದು'ಎಂದು ಯಕ್ಷಗುರು ಕೋಟ ಶ್ರೀಧರ ಹಂದೆ ಶುಭ ಹಾರೈಸಿದರು.

ಹಿರಿಯರಾದ ಕೋಟ ಶ್ರೀಧರ ಹಂದೆಯವರ ಸಾಧನೆಗೆ ತಲೆಬಾಗುವುದರ ಮೂಲಕ ಡಾ| ಬಸವರಾಜ್ ಶೆಟ್ಟಿಗಾರ್ ತಮ್ಮ 53ನೇ ಜನ್ಮದಿನೋತ್ಸವವನ್ನು ವಿಶಿಷ್ಠವಾಗಿ ಆಚರಿಸಿದರು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ರಾಷ್ಟ್ರಪ್ರಶಸ್ತಿ ಪುರಸ್ಕೃತ,ಶಿಕ್ಷಕ ಹಾಗೂ ಯಕ್ಷಗುರು ಕೋಟ ಶ್ರೀಧರ ಹಂದೆ ಹಾಗೂ ವಸುಮತಿ ಶ್ರೀಧರ ಹಂದೆಯವರಿಗೆ ಪಾದಪೂಜೆ ಮಾಡಿ, ಸನ್ಮಾನಿಸಿ, ಗೌರವಿಸಿ ಗುರುವಂದನೆಯನ್ನು ವಾಸ್ತುತಜ್ಞ ಡಾ| ಬಸವರಾಜ್ ಶೆಟ್ಟಿಗಾರ್ ಸಲ್ಲಿಸಿದರು. ತಮ್ಮ 53ನೇ ಜನ್ಮದಿನೋತ್ಸವವನ್ನು ಅವರು ಹಿರಿಯರಾದ ಕೋಟ ಶ್ರೀಧರ ಹಂದೆಯವರ ಸಾಧನೆಗೆ ತಲೆಬಾಗುವುದರ ಮೂಲಕ ವಿಶಿಷ್ಠವಾಗಿ ಆಚರಿಸಿದರು.

ಗುರುವಂದನೆಯನ್ನು ಸ್ವೀಕಾರ ಮಾಡಿದ ಶ್ರೀಧರ ಹಂದೆಯವರು ಮಾತನಾಡುತ್ತ, ಬಸವರಾಜ್ ಶೆಟ್ಟಿಗಾರ್ ಪ್ರಸಂಗಕರ್ತರಾಗಿ, ನಾಟಕರ್ತರಾಗಿ, ಕಾದಂಬರಿಗಾರರಾಗಿ, ನಟ – ನಿರ್ದೇಶಕರಾಗಿ, ಶನಿಕಥಾ ಪಾರಾಯಣಗಾರರಾಗಿ, ಜ್ಯೋತಿಷ್ಯರಾಗಿ, ಪ್ರಸಿದ್ಧ ವಾಸ್ತುತಜ್ಞರಾಗಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದನ್ನು ನೋಡಿದರೆ ಇವರೊಬ್ಬ ಆಡುಮುಟ್ಟದ ಸೊಪ್ಪಿಲ್ಲ ಬಸವರಾಜ್ ಶೆಟ್ಟಿಗಾರ್ ಮಾಡದ ಸಾಧನೆ ಇಲ್ಲ ಎಂದು ಹೇಳಿದರೂ ಅತಿಶಯೋಕ್ತಿ ಆಗಲಾರದು ಎಂದು ಶುಭ ಹಾರೈಸಿದರು.

ಬಸವರಾಜ್ ಶೆಟ್ಟಿಗಾರ್

ಈ ಸಂದರ್ಭದಲ್ಲಿ ವಿನೀತ ಸುಜಯೀಂದ್ರ ಹಂದೆ, ಕಾವ್ಯಶ್ರೀ ಬಸವರಾಜ್ ಶೆಟ್ಟಿಗಾರ್, ಭವಾನಿ ದಯಾನಂದ ಶೆಟ್ಟಿಗಾರ್, ಸುಚಿತ್ರ ಶೆಟ್ಟಿಗಾರ್, ಉಪನ್ಯಾಸಕಿ ಆರತಿ ಮಂಜೇಶ್ವರ, ಸೌಜನ್ಯಶ್ರೀ ಲೋಕೇಶ್ ಕುಮಾರ್, ಕಾವ್ಯ ಹಂದೆ ಉಪಸ್ಥಿತರಿದ್ದರು.

ಕಾರ್ಕಳದ ಅಜೇಯ್ ಕುಮಾರ್ ಸ್ವಾಗತಿಸಿದರು. ಲೋಕೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Get real time updates directly on you device, subscribe now.