ಬೀದರ್: ‘ಸರ್ವಕಲಾ ಆಚಾರ್ಯ ಶಿಖಾಮಣಿ’ ಪ್ರಶಸ್ತಿಗೆ ಡಾ| ಕೆ. ಬಸವರಾಜ್ ಶೆಟ್ಟಿಗಾರ್ ಆಯ್ಕೆ

60 ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದು 19 ನಾಟಕಗಳಲ್ಲಿ 2 ನಾಟಕಗಳಿಗೆ ಜಿಲ್ಲಾ ಪ್ರಶಸ್ತಿ ಲಭಿಸಿದೆ.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸ್ಕಂದಪ್ರಶಸ್ತಿ, ಡಾ| ಶಿವರಾಮ ಕಾರಂತ ರಾಜ್ಯ ಪ್ರಶಸ್ತಿ, ಕಲಾಸಾಧಕ ರಾಜ್ಯ ಪ್ರಶಸ್ತಿ, ಬಸವರತ್ನ ರಾಷ್ಟ್ರಪ್ರಶಸ್ತಿ, ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಈಗಾಗಲೇ ಸಂದಿವೆ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ‘ದೇಶಪಾಂಡೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ’ ಬೀದರ್ ಜಿಲ್ಲೆ ಮತ್ತು ‘ಮಂದಾರ ಕಲಾ ವೇದಿಕೆ’ ಬೀದರ್ ಹಾಗೂ ‘ಎಮ್.ಜಿ ದೇಶಪಾಂಡೆ ಯೂಟ್ಯೂಬ್ ಬಳಗ’ ಕೊಡಮಾಡುವ ಪ್ರಶಸ್ತಿ ‘ಸರ್ವಕಲಾ ಆಚಾರ್ಯ ಶಿಖಾಮಣಿ ರಾಜ್ಯ ಪ್ರಶಸ್ತಿಗೆ ವಾಸ್ತುತಜ್ಙ ಡಾ| ಕೆ. ಬಸವರಾಜ್ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆಂದು ಹಿರಿಯ ಸಾಹಿತಿ ಎಮ್.ಜಿ. ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಸವರಾಜ್ ಶೆಟ್ಟಿಗಾರ್ 20 ವರ್ಷಗಳ ಹಿಂದೆ ಕೇರಳದ ಪಯ್ಯನೂರಿನಲ್ಲಿ ಜ್ಯೋತಿಷ್ಯ ಹಾಗೂ ವಾಸ್ತುಶಾಸ್ತ್ರದ ಬಗ್ಗೆ ಅಧ್ಯಯನ ಮಾಡಿ ಪಾಂಡಿತ್ಯವನ್ನು ಅರ್ಜಿಸಿಕೊಂಡು ಈಗಾಗಲೇ ಗಣಪತಿ ಹೋಮ, ಗೃಹಪ್ರವೇಶ, ಮದುವೆ, ಸತ್ಯನಾರಾಯಣ ಪೂಜೆ ಹೀಗೆ ಹಲವಾರು ಹೋಮ ಹವನಾದಿಗಳನ್ನು ಮಾಡಿರುವುದರೊಂದಿಗೆ 1 ಲಕ್ಷಕ್ಕೂ ಮಿಕ್ಕಿ ಹೊಸ ಹಾಗೂ ಹಳೆ ಮನೆಯ ವಾಸ್ತುವಿನ್ಯಾಸವನ್ನು ಮಾಡಿದ್ದು ಲಕ್ಷಾಂತರ ಜಾತಕ ಪರಿಶೀಲನೆ ರಚನೆ ಮಾಡಿರುತ್ತಾರೆ. ಈಗಾಗಲೇ ದೇಶ ವಿದೇಶದೆಲ್ಲೆಡೆ ತಮ್ಮ ಪಾಂಡಿತ್ಯವನ್ನು ತೋರ್ಪಡಿಸಿದ ಹೆಮ್ಮೆ ಇವರಿಗಿದೆ. ಅಲ್ಲದೇ ಶೆಟ್ಟಿಗಾರರು ಪ್ರ್ರಸಂಗಸಾಹಿತ್ಯ, ಪತ್ರಿಕಾರಂಗ, ನಾಟಕರಂಗ, ಸಾಮಾಜಿಕ ಕ್ಷೇತ್ರ, ಕಲಾಕ್ಷೇತ್ರ, ಕೃಷಿಕ್ಷೇತ್ರ, ಧಾರ್ಮಿಕ ಕ್ಷೇತ್ರಗಳ ರೂವಾರಿಯಾಗಿ ಹಾಗೂ ಯುವ ಸಂಘಟಕರಾಗಿ 38 ವರ್ಷಗಳಿಂದ 16 ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ ದೇಶಪಾಂಡೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಬೀದರ್ ಜಿಲ್ಲೆ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಶೆಟ್ಟಿಗಾರರ ಸಾಧನೆಗೆ ಸಂದ ಗೌರವವಾಗಿದೆ ಎಂದು ತಿಳಿಸಿದ್ದಾರೆ.

ಶೆಟ್ಟಿಗಾರರು 60 ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದು 19 ನಾಟಕಗಳಲ್ಲಿ 2 ನಾಟಕ ಜಿಲ್ಲಾ ಪ್ರಶಸ್ತಿ ಲಭಿಸಿದೆ. 4 ಕಾದಂಬರಿಗಳನ್ನು ದ್ದಾರೆ.  ನೂರಾರು ಭಕ್ತಿಗೀತೆ, ಭಾವಗೀತೆ, ಜಾನಪದಗೀತೆ, ಕಥೆಗಳನ್ನು ರಚಿಸಿದ್ದು ನಟನಾಗಿ, ನಿರ್ದೇಶಕನಾಗಿ, ತಾಳಮದ್ದಲೆ ಅರ್ಥಧಾರಿಯಾಗಿ, ಯಾವುದೇ ವಿಚಾರದಲ್ಲಿ ಅಧಿಕಾರವಾಣಿಯಿಂದ ಮಾತನಾಡುವ ಸಂಪನ್ಮೂಲ ವ್ಯಕ್ತಿಯಾಗಿ, 22ಕ್ಕೂ ಮಿಕ್ಕಿ ಸಂಘ – ಸಂಸ್ಥೆಗಳನ್ನು ಸ್ಥಾಪಿಸಿದ್ದು 5 ಸಂಘಟನೆಗಳು ತಮ್ಮ ಬೆಳ್ಳಿ ಹಬ್ಬವನ್ನು ಆಚರಿಸಿರುವ ಸಾಧನೆಗಳೇ ಶೆಟ್ಟಿಗಾರ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಕಾರಣ ಎಂದು ಪ್ರಶಸ್ತಿ ಸಮಿತಿ ತಿಳಿಸಿದೆ.

ಈಗಾಗಲೇ ಶೆಟ್ಟಿಗಾರ್ ಅಭಿಮಾನಿಗಳಿಂದ 395 ಸನ್ಮಾನವನ್ನು ಸ್ವೀಕರಿಸಿದ್ದು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸ್ಕಂದಪ್ರಶಸ್ತಿ, ಡಾ| ಶಿವರಾಮ ಕಾರಂತ ರಾಜ್ಯ ಪ್ರಶಸ್ತಿ, ಕಲಾಸಾಧಕ ರಾಜ್ಯ ಪ್ರಶಸ್ತಿ, ಬಸವರತ್ನ ರಾಷ್ಟ್ರಪ್ರಶಸ್ತಿ, ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಭೂಷಣ, ಭಾರತಭೂಷಣ, ಜೀವಮಾನಶ್ರೇಷ್ಠ ಸಾಧಕ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಶೆಟ್ಟಿಗಾರರಿಗೆ ಮೌಲ್ಯಾಧಾರಿತ ಕಥಾನಕಗಳ ಸರದಾರ, ಕ್ಷೇತ್ರ ಮಹಾತ್ಮೆಯ ಸರದಾರ, ಸಮಾಜರತ್ನ,  ಕಲಾಕೇಸರಿ, ಧರ್ಮಧುರಂದರ, ಧ್ವಜಪುರ ರತ್ನ, ಕರುನಾಡ ಕಣ್ಮಣಿ, ಪದ್ಮಶಾಲಿ ಕುಲ ದೀಪಕ, ಪದ್ಮಶಾಲಿ ಕಣ್ಮಣಿ, ಪದ್ಮಶಾಲಿ ಕುಲ ತಿಲಕ, ಜ್ಯೋಷ್ಯ ಚೂಡಾಮಣಿ  ಎಂಬಿತ್ಯಾದಿ ಬಿರುದುಗಳು ಪ್ರಾಪ್ತಿಯಾಗಿದೆ. ಇಂತಹ ಬಹುಮುಖ ಪ್ರತಿಭೆಗೆ  ಸರ್ವಕಲಾ ಆಚಾರ್ಯ ಶಿಖಾಮಣಿ ರಾಜ್ಯ ಪ್ರಶಸ್ತಿ ಎನ್ನುವಂತಾದ್ದು ಶೆಟ್ಟಿಗಾರರ ಕೀರ್ತಿ ಕಿರೀಟಕ್ಕೆ ತುರಾಯಿ ಇರಿಸಿದಂತಾಗಿದೆ.

ಶೆಟ್ಟಿಗಾರರು ರೇಡಿಯೋ ಮಾಧ್ಯಮದಲ್ಲಿ ವಾರದ ಅತಿಥಿಯಾಗಿ, ಚಿಂತನ ಮಾಲಿಕೆಯಲ್ಲಿ ತಮ್ಮ ಅಮೂಲ್ಯ ಪ್ರತಿಭೆಯನ್ನು ವ್ಯಕ್ತಪಡಿಸಿದ್ದು ಉಡುಪಿ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳ ದೃಶ್ಯ ಮಾಧ್ಯಮಗಳಿಗೆ ಉದ್ಘೋಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಹಲವಾರು ಟಿವಿ ಮಾಧ್ಯಮದಲ್ಲಿ ಇವರ ಸಂದರ್ಶನಗಳು ಪ್ರಸಾರವಾಗಿವೆ. 39 ಕ್ಷೇತ್ರಗಳ ಅಧ್ಯಯನ ಮಾಡಿ 39 ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರಸಂಗವನ್ನು ಬರೆದು ರಂಗಕ್ಕೆ ನೀಡಿ ಜಾಗತಿಕ ದಾಖಲೆ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.