ಉದ್ಯಾವರ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾಗಿ ಶೇಖರ್ ಕೆ. ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಯಾಗಿ ರಿಯಾಜ್ ಪಳ್ಳಿ

ಗೌರವ ಅಧ್ಯಕ್ಷರಾಗಿ ಮಾಜಿ ಕೇಂದ್ರ ಸಚಿವ, ರಾಜ್ಯಸಭಾ ಸದಸ್ಯರಾದ ಓಸ್ಕರ್ ಫೆರ್ನಾಂಡಿಸ್.

ಸಂಸ್ಥೆಯ 47ನೇ ಮಹಾಸಭೆಯು ಸಂಸ್ಥೆಯ ಅಧ್ಯಕ್ಷರಾದ ತಿಲಕರಾಜ್ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಜರಗಿತು.

ಕರಾವಳಿ ಕರ್ನಾಟಕ ವರದಿ
ಉಡುಪಿ: ಉದ್ಯಾವರ ಫ್ರೆಂಡ್ಸ್ ಸರ್ಕಲ್ 2020-21 ರ ಸಾಲಿನ (47ನೇ ವರ್ಷ) ಅಧ್ಯಕ್ಷರಾಗಿ ಶೇಖರ್ ಕೆ. ಕೋಟ್ಯಾನ್, ಗೌರವ ಅಧ್ಯಕ್ಷರಾಗಿ ಮಾಜಿ ಕೇಂದ್ರ ಸಚಿವ, ರಾಜ್ಯಸಭಾ ಸದಸ್ಯರಾದ ಓಸ್ಕರ್ ಫೆರ್ನಾಂಡಿಸ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ರಿಯಾಝ್ ಪಳ್ಳಿ ಆಯ್ಕೆಗೊಂಡರು.

ಗೌರವ ಅಧ್ಯಕ್ಷ ರಾಜ್ಯಸಭಾ ಸದಸ್ಯ ಓಸ್ಕರ್ ಫೆರ್ನಾಂಡಿಸ್

ಉಪಾಧ್ಯಕ್ಷರಾಗಿ ಮೇರಿ ಡಿಸೋಜಾ, ಪುಂಡರೀಶ್ ಕುಂದರ್, ಕಾರ್ಯದರ್ಶಿಗಳಾಗಿ ಅನುಪ್ ಕುಮಾರ್, ರವಿಕಿರಣ್ ಪಿ.ಎಸ್., ಕೋಶಾಧಿಕಾರಿಗಳಾಗಿ ಸೋಮಶೇಖರ್ ಸುರತ್ಕಲ್, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಧರ ಗಣೇಶ್ ನಗರ, ಸಂಘಟನಾ ಕಾರ್ಯದರ್ಶಿಗಳು ಮಹಮ್ಮದ್ ಆಸಿಫ್, ಪ್ರೇಮ್ ಮಿನೇಜಸ್, ಆಂತರಿಕ ಲೆಕ್ಕಪರಿಶೋಧಕರಾಗಿ ಹಬೀಬ್ ಪಳ್ಳಿ, ನಿರ್ದೇಶಕರಾಗಿ ಅಬ್ಬುಲ್ ಜಲೀಲ್ ಸಾಹೇಬ್, ಮಹಮ್ಮದ್ ನಯಾಜ್, ಜಾರ್ಜ್ ಮಿನೇಜಸ್, ಯು. ಪಧ್ಮನಾಭ ಕಾಮತ್, ಚಂದ್ರಾವತಿ ಎಸ್. ಭಂಡಾರಿ, ಶರತ್ ಕುಮಾರ್, ಉದ್ಯಾವರ ನಾಗೇಶ್ ಕುಮಾರ್.

ಪ್ರಧಾನ ಕಾರ್ಯದರ್ಶಿ ರಿಯಾಝ್ ಪಳ್ಳಿ

ಸಂಸ್ಥೆಯ 47ನೇ ಮಹಾಸಭೆಯು ಸಂಸ್ಥೆಯ ಅಧ್ಯಕ್ಷರಾದ ತಿಲಕರಾಜ್ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಜರಗಿತು. ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಸೋಮಶೇಖರ ಸುರತ್ಕಲ್ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.

ಉದ್ಯಾವರ ನಾಗೇಶ್ ಕುಮಾರ್

ವೇದಿಕೆಯಲ್ಲಿ ನಿರ್ದೇಶಕರಾದ ಉದ್ಯಾವರ ನಾಗೇಶ್ ಕುಮಾರ್ ಮತ್ತು ಶರತ್ ಕುಮಾರ್  ಯು.ಪಧ್ಮನಾಭ ಕಾಮತ್, ಚಂದ್ರಾವತಿ ಎಸ್.ಭಂಡಾರಿ ಉಪಸ್ಥಿತರಿದ್ದರು.

ಸದಸ್ಯರನ್ನು ಉದ್ದೇಶಿಸಿ ಹಿರಿಯ ಸದಸ್ಯರಾದ ಶೇಖರ್ ಕೆ. ಕೋಟ್ಯಾನ್, ಆಬಿದ್ ಆಲಿ. ರಫೀಕ್ ಯೂಸೂಫ್ ಮಾತನಾಡಿದರು.

ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ ವಂದಿಸಿದರು

Get real time updates directly on you device, subscribe now.